ರಾಷ್ಟ್ರೀಯ

ಆಕೆ ಪತಿಯ ಬಳಿಯೂ ಹೇಳಿಕೊಳ್ಳದ ಆ ರಹಸ್ಯಗಳೇನು…?

Pinterest LinkedIn Tumblr

2wifeಆಕೆ ನನ್ನನ್ನು ತುಂಬಾನೇ ಪ್ರೀತಿ ಮಾಡುತ್ತಾಳೆ. ಮದುವೆಯಾಗಿ ಇಷ್ಟು ಸಮಯ ಆಯ್ತು ಇಂದಿಗೂ ಸಹ ಆಕೆ ಯಾವುದೇ ವಿಷಯವನ್ನೂ ಸಹ ನನ್ನಿಂದ ಮುಚ್ಚಿಡಲಿಲ್ಲ. ಯಾವ ವಿಷಯವನ್ನೂ ಸಹ ಆಕೆ ನನ್ನ ಬಳಿ ಹೇಳದೇ ಇರಲಾರಳು ಎಂದು ಎಲ್ಲಾ ಪತಿಯಂದಿರು ಅಂದುಕೊಳ್ಳುತ್ತಾರೆ. ಆದ್ರೆ ನೀವು ರಾಂಗ್‌. ಪತ್ನಿ ತನ್ನ ಪತಿಯನ್ನು ಎಷ್ಟು ಪ್ರೀತಿ ಮಾಡಿದರೂ ಸಹ ಆಕೆ ಕೆಲವೊಂದು ವಿಷಯಗಳನ್ನ ನಿಮ್ಮಿಂದ ಮುಚ್ಚಿಡುತ್ತಾಳೆ.

ಅಂತಹ ಯಾವ ವಿಷಯಗಳನ್ನುಸಾಕೆ ನಿಮ್ಮಲ್ಲಿ ಹೇಳದೆ ಮುಚ್ಚಿಡುತ್ತಾಳೆ ಎಂಬುದನ್ನು ತಿಳಿಯಬೇಕಾದರೆ ಮುಂದೆ ಓದಿ…

ಮದುವೆಯ ನಂತರ ಕೆಲವು ಮಹಿಳೆಯರು ಹಣ, ಆಭರಣ, ಐಷಾರಾಮಿ ಜೀವನ ಇವನ್ನೆಲ್ಲಾ ಇಷ್ಟ ಪಡೋದೇ ಇಲ್ಲ.
ಆಕೆ ತನ್ನ ಮಾಜಿ ಪ್ರಿಯಕರನ ಚುಂಬಕ ಪ್ರೀತಿಯಿಂದ ಯಾವತ್ತೋ ಹೊರಗೆ ಬಂದಿರಬಹುದು. ಆದರೆ ಆಕೆಯ ಮನಸಿನ ಯಾವುದೋ ಮೂಯಲ್ಲಿ ಆಕೆ ಇನ್ನೂ ಸಹ ತನ್ನ ಮಾಜಿ ಪ್ರಿಯಕರನ ಬಗ್ಗೆ ಯೋಚನೆ ಮಾಡುತ್ತಾಳೆ. ಇದು ನಿಮಗೆ ತಿಳಿದಿರುವುದಿಲ್ಲ.
ಸೆಕ್ಸ್‌ ಮಾಡುವಾಗ ಆಕೆ ಸಕ್ರಿಯವಾಗಿ ಇದ್ದರೂ ಸಹ ತನಗೆ ಏನು ಬೇಕು, ಯಾವ ರೀತಿ ಸುಖ ಬೇಕು ಎಂಬುದನ್ನು ಆಕೆ ಹೇಳೋದೆ ಇಲ್ಲ. ಬದಲಾಗಿ ತನ್ನ ಪತಿಗೆ ಬೇಕಾದ ರೀತಿ ಆಕೆ ಇರುತ್ತಾಳೆ.
ತನಗೆ ಯಾವುದಾದರು ಸಮಸ್ಯೆ ಬಂದರೆ ಎಲ್ಲಿ ಅದು ಪತಿ ಹಾಗೂ ಕುಟುಂಬಕ್ಕೆ ಗೊತ್ತಾಗಿ ದೊಡ್ಡ ರಗಳೆಯಾಗಿ ಎಲ್ಲರಿಗೂ ತೊಂದರೆಯಾಗುತ್ತದೆ ಎಂದು ಎನಿಸಿ ಆಕೆ ಆ ವಿಷಯವನ್ನು ಮುಚ್ಚಿಡುತ್ತಾಳೆ.
ನೀವು ಮಾಡುವ ಹಲವಾರು ವಿಷಯಗಳು ಆಕೆಗೆ ಇಷ್ಟವಾಗದೇ ಇರಬಹುದು. ಆದರೆ ಇದನ್ಯಾವುದನ್ನು ಆಕೆ ನಿಮ್ಮೆದುರು ಇಡಲು ಬಯಸುವುದಿಲ್ಲ. ಯಾಕೆಂದರೆ ಇದರಿಂದ ಇಬ್ಬರ ನಡುವಿನ ಅಂತರ ಇನ್ನಷ್ಟು ಹೆಚ್ಚಾದರೆ ಎಂದು ಭಯ.
ಪತ್ನಿ ಯಾವತ್ತೂ ತನ್ನ ಹಣಕಾಸಿನ ವಿಚಾರದ ಬಗ್ಗೆ ಗುಟ್ಟು ಬಿಟ್ಟು ಕೊಡಲ್ಲ. ಆದರೆ ಪತಿಗೆ ಯಾವತ್ತಾದರೂ ನೆರವಿಗೆ ಹಣ ಬೇಕಾದರೆ ಬೇಗನೆ ತಂದು ಕೊಡುತ್ತಾಳೆ.
ಪತಿಯ ತಾಯಿಯ ಬಗ್ಗೆ ಆಕೆಗೆ ಏನೋ ಸಿಟ್ಟು ಇರಬಹುದು. ಆದರೆ ಅದನ್ನು ಆಕೆ ಪತಿಯ ಮುಂದೆ ಹೇಳುವುದಿಲ್ಲ. ಹೇಳಿದರೆ ಎಲ್ಲಿ ಸಂಸಾರ ಹಾಳಾಗುತ್ತದೆ ಎಂಬ ಭಯ.
ಮಕ್ಕಳ ಶಿಕ್ಷಣ, ಮಗಳ ಮದುವೆಯ ಬಗ್ಗೆ ಅವರು ತನ್ನದೇ ರೀತಿಯ ಯೋಚಿಸಿ ಅದರಂತೆ ಅವರನ್ನು ಬೆಳೆಸಲು ಪ್ರಯತ್ನಿಸುತ್ತಾಳೆ. ಈ ಕುರಿತು ಗಂಡನಿಗೆ ಏನೂ ಹೇಳೋದಿಲ್ಲ.

Write A Comment