ಭೋಪಾಲ್: ಗೋಮಾಂಸ ಕೊಂಡೊಯ್ಯುತ್ತಿದ್ದಾರೆ ಎಂಬ ಶಂಕೆ ಮೇಲೆ ಮುಸ್ಲಿಂ ದಂಪತಿಗಳ ಮೇಲೆ ಗೋರಕ್ಷ ಸಮಿತಿ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ.
ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮುಸ್ಲಿಂ ದಂಪತಿ ಮೇಲೆ ಮಧ್ಯಪ್ರದೇಶದ ಹರ್ದಾ ಜಿಲ್ಲೆ ಬಳಿ ಹಲ್ಲೆ ನಡೆದಿದೆ. ಹೈದರಾಬಾದ್ ನಿಂದ ಖುಷಿನಗರ್ ಎಕ್ಸ್ ಪ್ರೆಸ್ ನಲ್ಲಿ ಮಧ್ಯಪ್ರದೇಶಕ್ಕೆ ವಾಪಸ್ಸಾಗುತ್ತಿದ್ದ ಮುಸ್ಲಿಂ ದಂಪತಿಗಳು ಗೋಮಾಂಸ ಕೊಂಡೊಯ್ಯುತ್ತಿದ್ದಾರೆ ಎಂಬ ಮಾಹಿತಿ ಪಡೆದ ಗೋರಕ್ಷ ಸಮಿತಿ ಕಾರ್ಯಕರ್ತರು ಮೊಹಮ್ಮದ್ ಹುಸೇನ್ ಅವರ ಲಗೇಜ್ ನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಗೋರಕ್ಷ ಬ್ಯಾಗ್ ಒಂದರಿಂದ ಗೋಮಾಂಸವನ್ನು ವಶಪಡಿಸಿಕೊಂಡಿದ್ದು, ಪ್ರಯೋಗಾಲಯದಲ್ಲಿ ಗೋಮಾಂಸ ಎಂಬುದು ಸಾಬೀತಾಗಿದೆ ಎನ್ನಲಾಗಿದೆ.
ಗೋರಕ್ಷ ಸಮಿತಿ ಕಾರ್ಯಕರ್ತರು ಲಗೇಜ್ ನ್ನು ಪರಿಶೀಲನೆ ನಡೆಸಲು ಮುಂದಾದಾಗ ಮೊಹಮ್ಮದ್ ಹುಸೇನ್ ಅವರ ಪತ್ನಿ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಘರ್ಷಣೆ ಉಂಟಾಗಿದ್ದು, ಹಲ್ಲೆಗೊಳಗಾದ ಮುಸ್ಲಿಂ ದಂಪತಿಗಳ ಸಂಬಂಧಿಕರು ಸೇರಿದಂತೆ ಪೊಲೀಸರು ಒಟ್ಟು 9 ಜನರನ್ನು ಬಂಧಿಸಿದ್ದರು. ನಂತರ ಬಂಧಿತರು ಜಾಮೀನಿನು ಪಡೆದು ಬಿಡುಗಡೆಯಾಗಿದ್ದಾರೆ ಎಂದು ತಿಳಿದುಬಂದಿದೆ.