ಚಂಕನ್: ದೇಶದಲ್ಲಿ ಸಣ್ಣ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಹೀಂದ್ರಾ ಕಂಪೆನಿ ಸಣ್ಣ ಕಾರುಗಳಲ್ಲಿ ‘ಎಸ್‌ಯುವಿ’ ಮಾದರಿಯ ಹೊಸ ಕೆಯುವಿ 100 ವಾಹನ ಬಿಡುಗಡೆ ಮಾಡಿದೆ.
ಇದು ಮಹೀಂದ್ರಾ ಕಂಪೆನಿಯ ಮೊದಲ ಪೆಟ್ರೋಲ್ ಚಾಲಿತ ವಾಹನ ಎಂಬುದು ವಿಶೇಷ. ಸ್ಪರ್ಧಾತ್ಮಕ ದರವನ್ನು ನೀಡಲಾಗಿದ್ದು, ಆರಂಭಿಕ 4.42 ಲಕ್ಷ ರೂ. (ಪುಣೆ ಎಕ್ಸ್‌ಷೋರೂಂ) ಬೆಲೆ ಹೊಂದಿದೆ. ಡೀಸೆಲ್ ಕಾರುಗಳ ವಿರುದ್ಧ ಇತ್ತೀಚೆಗೆ ಸುಪ್ರೀಂ ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮಹೀಂದ್ರಾ ಹೊಸ ಮಾದರಿ ಕಾರುಗಳ ಮಾರುಕಟ್ಟೆ ಪ್ರವೇಶಿಸಿದೆ.
-ಉದಯವಾಣಿ