ರಾಷ್ಟ್ರೀಯ

ಮಹಾತ್ಮಗಾಂಧಿ ರಾಷ್ಟ್ರಪಿತನಾದ್ರೆ, ಸುಭಾಷ್‌ಚಂದ್ರ ಬೋಸ್ ರಾಷ್ಟ್ರ ನಾಯಕ: ಮಮತಾ

Pinterest LinkedIn Tumblr

mamatha-24ಕೋಲ್ಕತಾ: ಒಂದು ವೇಳೆ ಮಹಾತ್ಮಗಾಂಧಿ ಅವರು ರಾಷ್ಟ್ರಪಿತನಾದ್ರೆ ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರು ರಾಷ್ಟ್ರ ನಾಯಕ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹೇಳಿದ್ದಾರೆ.

ನೇತಾಜಿ ಅವರು ಕೋಲ್ಕತಾದಿಂದ ಪರಾರಿಯಾದ ದಿನದ ಅಂಗವಾಗಿ ಆಯೋಜಿಸಲಾಗಿದ್ದ 75ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಮಮತಾ, ಸುಭಾಷ್‌ಚಂದ್ರ ಬೋಸ್ ಅವರು ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂಬುದನ್ನು ನಾನು ನಂಬುವುದಿಲ್ಲ. ರಷ್ಯಾ ದೃಷ್ಠಿಕೋನದಂತೆ ಪ್ರಕರಣ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.

‘ನೇತಾಜಿ ಅವರು ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಅಂತ ನಾನು ನಂಬುವುದಿಲ್ಲ ಮತ್ತು ಇದು ನನ್ನ ವೈಯಕ್ತಿಕ ಅಭಿಪ್ರಾಯ. ಅವರು ಇನ್ನೂ ಬದುಕಿದ್ದಾರೆ ಅಥವಾ ಇಲ್ಲವೋ ಅಂತಾನೂ ನಮಗೆ ಗೊತ್ತಿಲ್ಲ’ ಎಂದರು.

ಸ್ವಾತಂತ್ರ್ಯ ಪೂರ್ವದಲ್ಲಿ ಜನವರಿ 16, 1941 ಮಹತ್ವದ ದಿನ. ಒಬ್ಬ ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಬ್ರಿಟಿಷರ ಗೃಹ ಬಂಧನದಿಂದ ತಪ್ಪಿಸಿಕೊಂಡ ದಿನ ಎಂದು ಪಶ್ಚಿಮ ಬಂಗಾಳ ಸಿಎಂ ಹೇಳಿದರು.

Write A Comment