ರಾಷ್ಟ್ರೀಯ

ಪಾನ್ ಮಸಾಲ ಜಾಹೀರಾತಿಗೆ ‘ನೋ’ ಎಂದ ಸನ್ನಿ ಲಿಯೋನ್

Pinterest LinkedIn Tumblr

Sunny-Leoneನವದೆಹಲಿ: ಪಾನ್ ಮಸಾಲ ಜಾಹೀರಾತುಗಳಲ್ಲಿ ಇಷ್ಟು ದಿನ ಮಿಂಚುತ್ತಿದ್ದ ಬಾಲಿವುಡ್ ನಟಿ ಸನ್ನಿ ಲಿಯೋನ್ ಅವರು ಇನ್ನು ಮುಂದೆ ಈ ರೀತಿಯ ಜಾಹೀರಾತುಗಳಲ್ಲಿ ನಟನೆ ಮಾಡುವುದಿಲ್ಲ ಎಂದು ಪ್ರಮಾಣ ಮಾಡಿದ್ದಾರೆ.

ಇತ್ತೀಚೆಗಷ್ಟೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಪಾನ್ ಮಸಾಲಾ ಜಾಹೀರಾತು ಪ್ರಚಾರಗಳಲ್ಲಿ ನಟನೆ ಮಾಡದಂತೆ ನಟರಿಗೆ ದೆಹಲಿ ಸರ್ಕಾರ ನೋಟಿಸ್ ಗಳನ್ನು ಮಾಡಿತ್ತು. ಇದೀಗ ನೋಟಿಸ್ ಗೆ ಪ್ರತಿಕ್ರಿಯೆ ನೀಡಿರುವ ಸನ್ನಿ ಲಿಯೋನ್ ಅವರು ಪಾನ್ ಮಸಾಲಾ ಜಾಹೀರಾತುಗಳಲ್ಲಿ ನಟನೆ ಮಾಡುವುದಿಲ್ಲ ಎಂದು ಪ್ರಮಾಣ ಮಾಡಿದ್ದಾರೆ.

ದೆಹಲಿ ಸರ್ಕಾರ ಮಾಡಿರುವ ಮನವಿಯನ್ನು ಸನ್ನಿ ಅವರ ಪತಿ ಡೇನಿಯಲ್ ವೇಬರ್ ಅವರು ಸ್ವೀಕರಿಸಿದ್ದು, ಇನ್ನು ಮುಂದೆ ಸನ್ನಿ ಯಾವುದೇ ಪಾನ್ ಮಸಾಲಾಗಳಾ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಅಲ್ಲದೆ, ಇನ್ನು ಮುಂದೆ ಸನ್ನಿ ಯಾವುದೇ ಪಾನ್ ಮಸಾಲಾ ಕಂಪನಿಗಳ ಜೊತೆಗೂ ಒಪ್ಪಂದಗಳನ್ನು ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ದೆಹಲಿ ಸರ್ಕಾರದ ಆರೋಗ್ಯ ಇಲಾಖೆಯ ಹೆಚ್ಚುವರಿ ನಿರ್ದೇಶಕರಾದ ಡಾ. ಎಸ್. ಕೆ. ಅರೋರಾ ಅವರು, ಸನ್ನಿ ಲಿಯೋನ್ ಅವರ ಪತಿ ಕರೆ ಮಾಡಿದ್ದರು. ಸನ್ನಿ ಲಿಯೋನ್ ಅವರು ಇನ್ನುಮುಂದೆ ಪಾನ್ ಮಸಾಲಾದ ಯಾವುದೇ ಜಾಹೀರಾತುಗಳಲ್ಲಿ ನಟಿಸುವುದಿಲ್ಲ ಹಾಗೂ ಯಾವುದೇ ರೀತಿಯ ಒಪ್ಪಂದಗಳನ್ನು ಮಾಡಿಕೊಳ್ಳುವುದಿಲ್ಲ ಎಂದು ಮಾತನಾಡಿದರು ಎಂದು ಹೇಳಿದ್ದಾರೆ.

ಪಾನ್ ಮಸಾಲಾ ತಿನ್ನುವುದನ್ನು ನಿಷೇಧಿಸಲು ಮುಂದಾಗಿದ್ದ ದೆಹಲಿಯ ಆಮ್ ಆದ್ಮಿ ಪಕ್ಷದ ಸರ್ಕಾರದ ಆರೋಗ್ಯ ಇಲಾಖೆ, ಬಾಲಿವುಡ್ ನಟರಾದ ಅಜಯ್ ದೇವಗನ್, ಶಾರುಖ್ ಖಾನ್, ಸೈಫ್ ಅಲಿಖಾನ್, ಅರ್ಬಾಜ್ ಖಾನ್, ಗೋವಿಂದ ಹಾಗೂ ಸನ್ನಿ ಲಿಯೋನ್ ಸೇರಿದಂತೆ ಹಲವು ಬಾಲಿವುಟ್ ನಟರಿಗೆ ಪತ್ರ ಬರೆದಿದ್ದರು. ಪತ್ರದಲ್ಲಿ ಪಾನ್ ಮಸಾಲಾ ಜಾಹೀರಾತುಗಳಲ್ಲಿ ನಟನೆ ಮಾಡದಂತೆ ಹಾಗೂ ಪಾನ್ ಮಸಾಲಾ ಕಂಪನಿಗಳ ಜೊತೆ ಮಾಡಿಕೊಂಡಿರುವ ಎಲ್ಲಾ ಒಪ್ಪಂದಗಳನ್ನು ಹಿಂಪಡೆಯುವಂತೆ ಮನವಿ ಮಾಡಿತ್ತು.

Write A Comment