ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸಂಪುಟ ಪುನಾರಚನೆ ಮಾಡಲು ಒಲವು ತೋರಿದ್ದು ಶೀಘ್ರವೇ ಸಂಪುಟ ಪುನಾರಚನೆ ಮಾಡಲಿದ್ದಾರೆ. ಹಣಕಾಸು ಸಚಿವ ಅರುಣ್ ಜೈಟ್ಲಿ ಅವರ ಖಾತೆ ಬದಲಾಗಲಿದ್ದು. ಅವರಿಗೆ ರಕ್ಷಣಾ ಖಾತೆ ಹೊಣೆ ನೀಡುವ ಸಾಧ್ಯತೆಯಿದೆ.
ಹಣಕಾಸು ಸಚಿವರಾಗಿರುವ ಅರುಣ್ ಜೈಟ್ಲಿ ವಿದೇಶಿ ಹೂಡಿಕೆದಾರರಿಗೆ ಮೋದಿ ಅವರ ಸಂದೇಶ ರವಾನಿಸುವ ಜವಾಬ್ದಾರಿ ನಿರ್ವಹಿಸುವಲ್ಲಿ ವಿಫಲವಾಗಿದ್ದಾರೆ. ಹೀಗಾಗಿ ಅವರನ್ನ ಹಣಾಕಾಸು ಇಲಾಖೆ ವಾಪಸ್ ಪಡೆದು ರಕ್ಷಣಾ ಇಲಾಖೆ ಜವಾಬ್ದಾರಿ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಸದ್ಯ ಪೆಟ್ರೋಲಿಯಂ ಸಚಿವರಾಗಿರುವ ಪಿಯೂಶ್ ಗೋಯೆಲ್ ಅವರಿಗೆ ಹಣಕಾಸು ಇಲಾಖೆ ನೀಡುವ ಸಾಧ್ಯತೆ ಇದೆ.
ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಆರ್ಥಿಕತೆ ಶೀಘ್ರವಾಗಿ ಬೆಳೆಯಿತು.ಆದರೆ ತೆರಿಗೆ ಮತ್ತು ಭೂ ಸುಧಾರಣೆಗಳಲ್ಲಿ ಕೇಂದ್ರ ಸರ್ಕಾರ ವಿಫಲವಾಯಿತು. 2014ರ ಲೋಕಸಭೆ ಚುನಾವಣೆ ವೇಳೆ ಹೂಡಿಕೆದಾರರಿಗೆ ಮೋದಿ ನೀಡಿದ್ದ ಭರವಸೆಗಳು ಈಡೇರದೇ ಹೂಡಿಕೆದಾರರು ಭ್ರಮ ನಿರಸನಗೊಂಡಿದ್ದಾರೆ.
2017 ರಲ್ಲಿ ಉತ್ತರ ಪ್ರದೇಶ ವಿಧಾನ ಸಭೆ ಚುನಾವಣೆ ನಡೆಯಲಿದೆ. 2019 ರಲ್ಲಿ ಮತ್ತೆ ಲೋಕಸಭೆ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಗೆಲುವು ಸಾಧಿಸಬೇಕಾದರೇ ಉತ್ತರ ಪ್ರದೇಶ ವಿದಾನ ಸಭೆ ಚುನಾವಣೆಯಲ್ಲಿ ಜಯ ಗಳಿಸುವ ಅವಶ್ಯಕತೆ ಇದೆ. ಹೀಗಾಗಿ ಉತ್ತರ ಪ್ರದೇಶ ಚುನಾವಣೆ ಮೋದಿ ಸರ್ಕಾರಕ್ಕೆ ನಿರ್ಣಾಯಕವಾಗಿದೆ.
ಸರ್ಕಾರದಲ್ಲಿ ವೇಗದ ಬದಲಾವಣೆ ತರಲು ಸಂಪುಟದಲ್ಲಿ ಹೊಸಬರಿಗೆ ಅವಕಾಶ ನೀಡಬೇಕೆಂದು ಮೋದಿ ನಿರ್ಧರಿಸಿದ್ದಾರೆ. ಸಂಪುಟ ಪುನಾರಚನೆ ಮಾಡಲು ಈಗ ಒಳ್ಳೆಯ ಸಮಯವಾಗಿದ್ದು, ಈಗ ಮಾಡದಿದ್ದರೆ ಮುಂದೆ ಕಷ್ಟವಾಗಲಿದೆ ಎಂದು ಹಿರಿಯ ಪತ್ರಕರ್ತರೊಬ್ಬರು ಹೇಳಿದ್ದಾರೆ.