ರಾಷ್ಟ್ರೀಯ

1 ತಿಂಗಳ ನಂತರ ಪ್ರಶಸ್ತಿ ವಾಪಸ್ ಪಡೆಯಲು ಒಪ್ಪಿದ ನಯನತಾರಾ ಸೆಹಗಲ್

Pinterest LinkedIn Tumblr

nayantar-22ನವದೆಹಲಿ: ಸುಮಾರು 1 ತಿಂಗಳ ನಂತರ ಲೇಖಕಿ ನಯನತಾರಾ ಸೆಹಗಲ್ ಅವರು ದಾದ್ರಿ ಹತ್ಯೆ, ಸಂಶೋಧಕ ಎಂ.ಎಂ. ಕಲಬುರ್ಗಿ ಹಾಗೂ ಮಹಾರಾಷ್ಟ್ರದ ವಿಚಾರವಾದಿಗಳಾದ ನರೇಂದ್ರ ದಾಭೋಲ್ಕರ್ ಮತ್ತು ಗೋವಿಂದ ಪಾನ್ಸರೆ ಹತ್ಯೆ ಖಂಡಿಸಿ ಸರ್ಕಾರಕ್ಕೆ ವಾಪಸ್ ಮಾಡಿದ್ದ ತಮ್ಮ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಹಿಂಪಡೆಯಲು ಶುಕ್ರವಾರ ಒಪ್ಪಿಕೊಂಡಿದ್ದಾರೆ.

ದೇಶದ ಮೊದಲ ಪ್ರಧಾನಿ ದಿ.ಜವಾಹರಲಾಲ್ ನೇಹರೂ ಅವರ ಸೋದರ ಸೊಸೆಯಾಗಿರುವ ಸೆಹಗಲ್ ಅವರು, ಪ್ರಶಸ್ತಿ ವಾಪಸಿ ಆಂದೋಲನದಕ್ಕೆ ಕೈಜೋಡಿಸಿದವರಲ್ಲಿ ಮೊದಲಿಗರು. ಆದರೆ ಪ್ರಶಸ್ತಿ ವಾಪಸ್ ನೀಡಲು ಅವಕಾಶ ಇಲ್ಲ ಎಂಬ ಕಾರಣಕ್ಕೆ ಇದೀಗ ಅದನ್ನು ಹಿಂಪಡೆಯಲು ಒಪ್ಪಿದ್ದಾರೆ.

ಈ ಬಗ್ಗೆ ಹಿಂದೂಸ್ತಾನ್ ಟೈಮ್ಸ್ ಗೆ ಪ್ರತಿಕ್ರಿಯಿಸಿರುವ ಸೆಹಗಲ್, ಪ್ರಶಸ್ತಿ ವಾಪಸ್ ಪಡೆಯುವುದು ನಮ್ಮ ನೀತಿಗೆ ವಿರುದ್ಧವಾಗಿದೆ ಮತ್ತು ಅದಕ್ಕೆ ಅವಕಾಶ ಇಲ್ಲ ಎಂದು ಅಕಾಡೆಮಿ ನನಗೆ ಪತ್ರ ಬರೆದಿತ್ತು. ಈ ಹಿನ್ನೆಲೆಯಲ್ಲಿ ನಾನು ಪ್ರಶಸ್ತಿಯನ್ನು ವಾಪಸ್ ಪಡೆಯಲು ಮತ್ತು ಅದರಿಂದ ಬಂದ ಹಣವನ್ನು ಸಮಾಜ ಕಲ್ಯಾಣ ಕಾರ್ಯಗಳಿಗೆ ಬಳಸುವುದಾಗಿ ತಿಳಿಸಿದ್ದಾರೆ.

ಭಾರತದ ವೈವಿಧ್ಯತೆಯ ಮೇಲೆ ‘ನಿಷ್ಕಾರುಣ್ಯ ಹಲ್ಲೆ” ನಡೆಯುತ್ತಿದ್ದರೂ, ಅದನ್ನು ರಕ್ಷಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಸೆಹಗಲ್(88) ಅವರು ತಮ್ಮ ಪ್ರಶಸ್ತಿಯನ್ನು ವಾಪಸ್ ಮಾಡಿದ್ದರು. 1986ರಲ್ಲಿ ಅವರಿಗೆ ಈ ಸಾಹಿತ್ಯಿ ಅಕಾಡೆಮಿ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು.

Write A Comment