ರಾಷ್ಟ್ರೀಯ

ನೇತಾಜಿಯವರ ಶ್ರಾದ್ಧ ಮಾಡಬೇಡಿ ಅಂದಿದ್ದರು ಗಾಂಧೀಜಿ

Pinterest LinkedIn Tumblr

gandhi_boseನವದೆಹಲಿ: ವಿಮಾನ ಅಪಘಾತದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಸಾವಿಗೀಡಾಗಿದ್ದಾರೆ ಎಂಬ ಸುದ್ದಿಯನ್ನು  22 ಆಗಸ್ಟ್  1945ರಲ್ಲಿ  ಡೋಮೀ ಸುದ್ದಿ ಸಂಸ್ಥೆ ಪ್ರಸಾರ ಮಾಡಿತ್ತು. ಈ ಸುದ್ದಿ ಹರಡುತ್ತಿದ್ದಂತೆ ಗಾಂಧೀಜಿಯವರು ಬೋಸ್ ಕುಟುಂಬಕ್ಕೆ ಟೆಲಿಗ್ರಾಂ ಕಳಿಸಿ ಬೋಸ್ ಅವರಿಗೆ ಶಾದ್ಧ ಮಾಡಬೇಡಿ ಎಂದಿದ್ದರು.

ಅಷ್ಟೇ ಅಲ್ಲ, ನೇತಾಜಿಯವರು ವಿಮಾನ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ ಎಂಬ ಸುದ್ದಿಯನ್ನು ಗಾಂಧೀಜಿ ಒಪ್ಪಿರಲಿಲ್ಲ.

ಸುಭಾಷ್ ಚಂದ್ರ ಬೋಸ್ ಅವರ ಅಣ್ಣ ಸರತ್ ಚಂದ್ರ ಬೋಸ್ ಅವರ ಪುತ್ರ  ಅಮೀಯಾ ನಾಥ್ ಬೋಸ್, ಆಗಸ್ಟ್ 7, 1995ರಲ್ಲಿ ಆಗಿನ ಪ್ರಧಾನಿಯಾಗಿದ್ದ ಪಿವಿ ನರಸಿಂಹ ರಾವ್ ಅವರಿಗೆ ಪತ್ರವೊಂದನ್ನು ಬರೆದಿದ್ದರು. ಅದರಲ್ಲಿ, ನೇತಾಜಿಯವರ ಜತೆ ವಿಮಾನದಲ್ಲಿದ್ದ ಕರ್ನಲ್ ಹಬೀಬುರ್ ರೆಹ್ಮಾನ್ ಅವರು ಒಂದು ದಿನ ದೆಹಲಿಯ ಭಾಂಗಿ ಕಾಲನಿಯಲ್ಲಿ ಗಾಂಧೀಜಿಯವರನ್ನು ಭೇಟಿ ಮಾಡಿದ್ದರು. ಆ ವೇಳೆ ನಾನು  ಅಲ್ಲಿ ನಾನೂ ಉಪಸ್ಥಿತನಿದ್ದೆ.  ರೆಹ್ಮಾನ್ ಅವರು 18 ಆಗಸ್ಟ್ 1945ರಂದು  ನಡೆದ ವಿಮಾನ ಅಪಘಾತದಲ್ಲಿ ನೇತಾಜಿ ಸಾವಿಗೀಡಾಗಿರುವ ಬಗ್ಗೆ ಮಾತನಾಡಿದ್ದರು.

ರೆಹ್ಮಾನ್ ಅಲ್ಲಿಂದ ಹೋದ ಮೇಲೆ ಅಲ್ಲಿ ನೆರೆದಿದ್ದ ಪತ್ರಿಕಾ ವರದಿಗಾರರನ್ನುದ್ದೇಶಿಸಿ ಗಾಂಧೀಜಿ ಮಾತನಾಡಿದ್ದರು. ಈ ವೇಳೆ ಗಾಂಧೀಜಿ, ಹಬೀಬ್ ಅವರು ಆತನ ನಾಯಕ ಹೇಳಿದ ಆದೇಶವನ್ನು ಪಾಲಿಸುತ್ತಿದ್ದಾರೆ. ಆದರೆ ವಿಮಾನ ಅಪಘಾತದಲ್ಲಿ ಸುಭಾಷ್ ಸಾವಿಗೀಡಾಗಿದ್ದಾರೆ ಎಂಬುದನ್ನು ನಾನು ನಂಬುವುದಿಲ್ಲ ಎಂದು ಹೇಳಿರುವುದಾಗಿ ಪತ್ರದಲ್ಲಿ ಅಮೀಯ ಸೇನ್ ಉಲ್ಲೇಖಿಸಿದ್ದಾರೆ.

Write A Comment