ರಾಷ್ಟ್ರೀಯ

ಇಬ್ಬರು ಮಹಿಳೆಯರು ಸೇರಿ ನಾಲ್ವರು ನಕ್ಸಲರ ಬಂಧನ

Pinterest LinkedIn Tumblr

1-Naxalರಾಯಪುರ: ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರು ನಕ್ಸಲರನ್ನು ಛತ್ತೀಸಗಢದ ದಂತೇವಾಡ ಜಿಲ್ಲೆಯಲ್ಲಿ ಶನಿವಾರ ಬಂಧಿಸಲಾಗಿದೆ.

ಇವರು ಕಳೆದ ವರ್ಷ ದಂತೇವಾಡದಲ್ಲಿ ಪೊಲೀಸ್ ವಾಹನವನ್ನು ಸುಟ್ಟುಹಾಕಿ, ಐವರು ಪೊಲೀಸರನ್ನು ಹತ್ಯೆಗೈದಿದ್ದರು. ಘಟನೆಯಲ್ಲಿ 8 ಮಂದಿ ಗಾಯಗೊಂಡಿದ್ದರು. ಬಂಧಿತ ಇಬ್ಬರು ಮಹಿಳೆಯರ ತಲೆಗೆ ತಲಾ ಒಂದು ಲಕ್ಷ ರೂಪಾಯಿ ಬಹುಮಾನ ಘೊಷಿಸಲಾಗಿತ್ತು.

ಪೊಲೀಸರ ಮೇಲೆ ದಾಳಿ, ರೈಲು ಹಳಿಗಳಿಗೆ ಹಾನಿ, ಗಣಿ ವಾಹನಗಳ ಮೇಲೆ ದಾಳಿ, ಕಟ್ಟಡ ನಿರ್ಮಾಣ ಯೋಜನೆಗಳ ಮೇಲೆ ದಾಳಿ ಸೇರಿದಂತೆ ಹಲವಾರು ದುಷ್ಕೃತ್ಯದಲ್ಲಿ ಬಂಧಿತರು ಪಾಲ್ಗೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Write A Comment