ರಾಷ್ಟ್ರೀಯ

ರೋಹಿತ್ ವೇಮುಲ ದಲಿತರೇ, ಒಬಿಸಿಗೆ ಸೇರಿದವರೇ?

Pinterest LinkedIn Tumblr

rohit-vemulaನವದೆಹಲಿ: ಹೈದರಾಬಾದಿನಲ್ಲಿ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಹೈದರಾಬಾದ್ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲ ದಲಿತರಲ್ಲವೇ? ಇತರೆ ಹಿಂದುಳಿದ ವರ್ಗಕ್ಕೆ (ಒಬಿಸಿ) ಸೇರಿದವರೇ? ವೇಮುಲ ದಲಿತರಲ್ಲ, ಇತರ ಹಿಂದುಳಿದ ವರ್ಗಕ್ಕೆ (ಒಬಿಸಿ) ಸೇರಿದವರು ಎಂದು ಇತ್ತೀಚಿನ ಮಾಧ್ಯಮ ವರದಿಗಳು ಹೇಳಿವೆ. ವೇಮುಲ ಅವರ ಹೆತ್ತವರು ವಡೇರಾದ ಕಲ್ಲುಕುಟಿಗ ಜಾತಿಗೆ ಸೇರಿದವರು. ಈ ಜಾತಿ ಒಬಿಸಿ ಪಟ್ಟಿಯಲ್ಲಿ ಬರುತ್ತದೆ. ಪ್ರಾಥಮಿಕ ತನಿಖೆ ಕಾಲದಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ ಎಂಬುದಾಗಿ ಉನ್ನತ ಪೊಲೀಸ್ ಅಧಿಕಾರಿಯನ್ನು ಉಲ್ಲೇಖಿಸಿ ಮಾಧ್ಯಮವೊಂದು ವರದಿ ಮಾಡಿದೆ.

ರೋಹಿತ್ ವೇಮುಲ ಅವರ ಹೆತ್ತವರು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಎಂಬುದಾಗಿ ಜಾತಿ ಪ್ರಮಾಣಪತ್ರ ಪಡೆದದ್ದು ಹೇಗೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿಲ್ಲ. ಗುಂಟೂರಿನಲ್ಲಿ ಪಡೆಯಲಾದ ಜಾತಿ ಪ್ರಮಾಣ ಪತ್ರದ ಪ್ರಕಾರ ಅವರು ಮಾಲಾ ಸಮುದಾಯಕ್ಕೆ ಸೇರಿದವರು. ಇದು ಪರಿಶಿಷ್ಟ ಜಾತಿ.

ರೋಹಿತ್ ವೇಮುಲ ಅವರ ಜಾತಿ ಕುರಿತು ಕೆಲವು ವ್ಯಕ್ತಿಗಳು ಮಾಡಿದ ಮನವಿ ಮೇರೆಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ವ್ಯಕ್ತಿಗಳು ಯಾರು ಎಂಬುದನ್ನು ಬಹಿರಂಗ ಪಡಿಸಲು ಪೊಲೀಸರು ನಿರಾಕರಿಸಿದ್ದಾರೆ ಎಂದು ಮಾಧ್ಯಮ ವರದಿ ತಿಳಿಸಿದೆ.

Write A Comment