ಬರ್ಮೆರ್: ಐಎಎಫ್ ಯåದ್ಧ ವಿಮಾನದಿಂದ ಕೆಳಕ್ಕೆ ಬಿದ್ದ ಪರಿಣಾಮ ಐದು ಬಾಂಬ್ಗಳು ಭಾರಿ ಸದ್ದು ಮಾಡಿರುವ ಘಟನೆ ರಾಜಸ್ಥಾನ ಬರ್ಮೆರ್ ಜಿಲ್ಲೆಯ ಗುಗ್ಡಿ ಪಟ್ಟಣ ವ್ಯಾಪ್ತಿಯಲ್ಲಿ ಮಂಗಳವಾರ ನಡೆದಿದೆ. ಐಎಎಫ್ಗೆ ಸೇರಿದ ವಿಮಾನದಿಂದ ಕೆಳಕ್ಕೆ ಬಿದ್ದಿರುವ ಬಾಂಬ್ಗಳಿಂದ ಉಂಟಾದ ಸದ್ದು ಸುಮಾರು 10 ಕಿಲೋಮೀಟರ್ ದೂರಕ್ಕೆ ಕೇಳಿಸಿದೆ ಎನ್ನಲಾಗಿದೆ. ಅಷ್ಟಕ್ಕೂ ಇದು ಆಕಸ್ಮಿಕವಾಗಿ ಆಗಿರುವ ಘಟನೆ ಎಂದು ಐಎಎಫ್ ಹೇಳಿಕೊಂಡಿದೆ ಎಂದು ವರದಿಯಾಗಿದೆ.
ನಿರ್ಜನ ಪ್ರದೇಶದಲ್ಲಿ ಬಿದ್ದಿರುವ ಕಾರಣ ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ಹೇಳಲಾಗಿದೆ. ಈಗಾಗಲೇ ಐಎಎಫ್ನ ತಜ್ಞರ ತಂಡ, ಸ್ಥಳೀಯ ಪೊಲೀಸ್ ತಂಡ ಘಟನಾ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸುತ್ತಿದೆ. ಹೆಚ್ಚಿನ ವಿವರ ಇನ್ನಷ್ಟೇ ಗೊತ್ತಾಗಬೇಕಿದೆ.