ತಿರುವನಂತಪುರಂ: ಇಬ್ಬರು ರಷ್ಯಾ ಮಹಿಳಾ ಪ್ರವಾಸಿಗರಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಕೇರಳದ ಆಟೋ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಜನವರಿ 22 ರಂದು ಪ್ರವಾಸಕ್ಕೆಂದು ಕೇರಳಕ್ಕೆ ಬಂದಿದ್ದ ರಷ್ಯಾ ಪ್ರವಾಸಿಗರಾದ ಹಿರೇನ ಝೈಕಿನ ಮತ್ತು ನಟಲಿಯಾ ಅವರು ಕೇರಳ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಈ ದೂರಿನನ್ವಯ ಆಟೋ ಚಾಲಕ ಜಲಾಲುದ್ದೀನ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಆಟೋ ಚಾಲಕ ಜಲಾಲುದ್ದೀನ್ ತಮ್ಮ ಆಟೋದಲ್ಲಿ ಬರುವಂತೆ ಬಲವಂತ ಮಾಡಿದ ಈ ವೇಳೆ ತಾವು ನಿರಾಕರಿಸಿದ್ದರಿಂದ ಅಸಭ್ಯವಾಗಿ ವರ್ತಿಸಿ ಕಿರುಕುಳ ನೀಡಿದ್ದಾನೆ ಎಂದು ಪ್ರವಾಸಿಗರು ದೂರಿದ್ದಾರೆ.