ರಾಷ್ಟ್ರೀಯ

ಬಲೂನ್‌ನಂಥ ಸಂಶಯಾಸ್ಪದ ವಸ್ತು ಹೊಡೆದುರುಳಿಸಿದ ವಾಯುಪಡೆ

Pinterest LinkedIn Tumblr

Sukhoi-30ನವದೆಹಲಿ (ಪಿಟಿಐ): ರಾಜಸ್ತಾನದ ಬಾರ್ಮೇರ್‌ನಲ್ಲಿ ‘ಅಪರಿಚಿತ’ ಬಲೂನ್‌ನಂಥ ಸಂಶಯಾಸ್ಪದ ವಸ್ತುವೊಂದನ್ನು ಭಾರತೀಯ ವಾಯುಪಡೆಯ ಸುಖೋಯ್‌-30 ಯುದ್ಧವಿಮಾನವು ಮಂಗಳವಾರ ಹೊಡೆದುರುಳಿಸಿದೆ.

ಗಣರಾಜ್ಯೋತ್ಸವ ಸಂಭ್ರಮಾಚರಣೆಗೆ ಉಗ್ರರ ಶಂಕಿತ ದಾಳಿ ಭೀತಿ ಹಿನ್ನೆಲೆಯಲ್ಲಿ ಈ ಘಟನೆ ಮಹತ್ವ ಪಡೆದುಕೊಂಡಿದೆ. ಅಲ್ಲದೇ, ರಾಜಸ್ತಾನದ ರಾಜಧಾನಿ ಜೈಪುರದಲ್ಲಿ ಲೋಹದ ತುಣುಕುಗಳಂಥ ಕೆಲ ವಸ್ತುಗಳ ಆಕಾಶದಿಂದ ಬೀಳುತ್ತಿವೆ ಎಂಬ ವರದಿಗಳ ಬೆನ್ನಲ್ಲೆ ಬಾರ್ಮೇರ್‌ನಲ್ಲಿ ಈ ಬೆಳವಣಿಗೆ ನಡೆದಿದೆ.

ಆದರೆ, ಹೊಡೆದುರುಳಿಸಲಾದ ವಸ್ತು ಹವಾಮಾನ ಇಲಾಖೆಯ ಬಲೂನ್ ಇರಬಹುದು ಎಂದು ರಕ್ಷಣಾ ಇಲಾಖೆಯ ಮೂಲಗಳು ಹೇಳಿವೆ.

‘ಮಂಗಳವಾರ ಬೆಳಿಗ್ಗೆ 10:30ರಿಂದ 11 ಗಂಟೆ ನಡುವೆ ಭಾರತೀಯ ವಾಯುಪಡೆಯ ರೆಡಾರ್‌ಗೆ ಅಪರಿಚಿತ ಬಲೂನ್‌ನಂಥ ವಸ್ತುವೊಂದು ಪತ್ತೆಯಾಗಿತ್ತು. ಅದಕ್ಕೆ ಐಎಎಫ್‌ ಯುದ್ಧ ವಿಮಾನವನ್ನು ಗುರಿಯಿಟ್ಟು ಕಳುಹಿಸಲಾಯಿತು. ಅದು ಸಂಶಯಾಸ್ಪದ ವಸ್ತುವನ್ನು ಹೊಡೆದುರುಳಿಸಿತು. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ’ ಎಂದು ಐಎಎಫ್‌ ವಕ್ತಾರೊಬ್ಬರು ತಿಳಿಸಿದ್ದಾರೆ.

Write A Comment