ನವದೆಹಲಿ : ಬಳಕೆದಾರರಿಂದ ಬರುತ್ತಿರುವ ಪ್ರತಿಕ್ರಿಯೆಗಳಿಂದ ನಿರಾಶರಾಗಿರುವ ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ಮಾರ್ಕಂಡೇಯಾ ಕಾಟ್ಜು ಅವರು ಸಾಮಾಜಿಕ ತಾಣಗಳನ್ನು ತೊರೆದಿದ್ದಾರೆ.
ಗಣರಾಜ್ಯೋತ್ಸವದಂದು ಇದು ನನ್ನ ಕಡೆಯ ಪೋಸ್ಟ್ ಎಂದು ಫೇಸ್‌ಬುಕ್‌ನಲ್ಲಿ ಬರೆದಿರುವ ಕಾಟ್ಜು ‘ನಾನು ನನ್ನ ಎಲ್ಲಾ ಜ್ಞಾನವನ್ನು ಹಂಚಿಕೊಂಡೆ. ಜೀವನದಲ್ಲಿ ಪಡೆದುಕೊಂಡ ಅನುಭವಗಳನ್ನು ನಿಮ್ಮೊಂದಿಗೆ ಹಂಚಿಕೊಂಡೆ.ಆದರೆ ನಾನೇನು ಮರಳಿ ಪಡೆದೆ? ಬಹುತೇಕರು ನನ್ನನ್ನು ನಿಂದಿಸಿದರು. ಯಾಕೆಂದರೆ ನಿಮ್ಮಲ್ಲಿ ಹೆಚ್ಚಿನವರು ಮೂರ್ಖರು ಮತ್ತು ಸೊಕ್ಕಿನವರು.. ಅಲ್ಲದೆ ನನ್ನಿಂದ ತಿಳಿದುಕೊಳ್ಳಲು ನಿಮಗೆ ಯಾವುದೇ ಇಚ್ಛೆ ಇಲ್ಲ’ ಎಂದು ಕಿಡಕಾರಿದ್ದಾರೆ.
ಇದೇ ಪೋಸ್ಟ್‌ನ ಸ್ಕ್ರೀನ್ ಶಾಟ್ ತೆಗೆದು ಟ್ವೀಟರ್‌ನಲ್ಲಿ ಪೋಸ್ಟ್ ಮಾಡಿ ಗುಡ್ ಬೈ ಎಂದು ಬರೆದಿದ್ದಾರೆ.
ಕಾಟ್ಜು ಅವರು ಸಾಮಾಜಿಕ ಜಾಲತಾಣಗಳಿಗೆ ಗುಡ್‌ಬೈ ಹೇಳಿರುವುದರಿಂದ ’90 % ಭಾರತೀಯರು ನೆಮ್ಮದಿಯಿಂದ ಇರಬಹುದಾಗಿದೆ ‘ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಸದಾ ವಿವಾದಾತ್ಮಕ ಹೇಳಿಕೆಗಳಿಂದು ಸುದ್ದಿಯಾಗುತ್ತಿದ್ದ ಕಾಟ್ಜು ‘ಮಹಾತ್ಮಾ ಗಾಂಧೀಜಿ ಅವರು ಬ್ರಿಟಿಷ್ ಏಜೆಂಟ್ ,ಸುಭಾಷ್‌ಚಂದ್ರ ಬೋಸ್ ಅವರು ಜಪಾನ್ ಏಜೆಂಟ್’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.
-ಉದಯವಾಣಿ