ರಾಷ್ಟ್ರೀಯ

ಪಠಾಣ್‌ಕೋಟ್ ದಾಳಿ: ಇನ್ನಷ್ಟು ಕುತೂಹಲಕರ ಅಂಶ ಬಹಿರಂಗ

Pinterest LinkedIn Tumblr

pathankot-8ನವದೆಹಲಿ, ಜ. ೨೭- ಪಠಾಣ್ ಕೋಟ್ ವಾಯುನೆಲೆ ಮೇಲೆ ಭಯೋತ್ಪಾದಕರು ಈ ತಿಂಗಳ ಆರಂಭದಲ್ಲಿ ನಡೆಸಿದ ದಾಳಿ ಕುರಿತ ಸೇನಾ ತಜ್ಞರ ವರದಿ ಹಲವು ಕುತೂಹಲಕಾರಿ ಅಂಶಗಳನ್ನು ಬಹಿರಂಗಪಡಿಸಿದೆ.

ವರದಿ ಪ್ರಕಾರ ಆರು ಮಂದಿ ಭಯೋತ್ಪಾದಕರ ಪೈಕಿ, ಇಬ್ಬರು ಭಯೋತ್ಪಾದಕರಿಗೆ ಇತರೆ ನಾಲ್ವರಿಗೆ ಮಾರ್ಗದರ್ಶಕರಾಗಿ ಕೆಲಸ ಮಾಡಬೇಕೆಂಬ ಜವಾಬ್ದಾರಿ ನೀಡಲಾಗಿತ್ತು. ಯುದ್ಧ ಹೆಲಿಕಾಪ್ಟರ್ ಹಾಗೂ ಜೆಟ್‌ಗಳ ನಿಲುಗಡೆ ಸ್ಥಾನಕ್ಕೆ ಉಳಿದ ನಾಲ್ವರು ಭಯೋತ್ಪಾದಕರಿಗೆ ದಾರಿತೋರಿಸುವ ಜವಾಬ್ದಾರಿ ಅವರ ಮೇಲಿತ್ತು.

ಇವರಿಬ್ಬರ ಬಳಿ ಮೆಷಿನ್ ಗನ್‌ಗಳು ಇರಲಿಲ್ಲ. ಶಸ್ತ್ರಸಜ್ಜಿತರಾಗಿ ಅವರಿರಲಿಲ್ಲ. ಆದರೆ ಅವರ ಬಳಿ ಸುಧಾರಿತ ಸ್ಫೋಟಕ ಉಪಕರಣಗಳು ಅಥವಾ ಐಇಡಿಗಳಿದ್ದವು. ಇದರ ಉದ್ದೇಶ ವಾಯುನೆಲೆಯಲ್ಲಿರುವ ಸೇನಾ ಸಾಮಗ್ರಿಗಳನ್ನು ಸಾಧ್ಯವಾದ ಮಟ್ಟಿಗೆ ನಾಶಪಡಿಸುವುದಾಗಿತ್ತು.

ಈ ದಾಳಿಯಲ್ಲಿ ಏಳು ಮಂದಿ ಯೋಧರು ಹುತಾತ್ಮರಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ನಾಲ್ವರು ಭಯೋತ್ಪಾದಕರಿದ್ದ ಗುಂಪನ್ನು ಗ್ರೂಪ್ 1 ಎಂದು ಉಲ್ಲೇಖಿಸಲಾಗಿತ್ತು. ಈ ಗುಂಪು ಜನವರಿ 2 ರಂದು ಮುಂಜಾನೆ 10 ಅಡಿ ಎತ್ತರ ಗೋಡೆ ಹಾರಿ ವಾಯುನೆಲೆ ಪ್ರವೇಶಿಸಿತ್ತು.
ಜನವರಿ 3 ರಂದು ಇವರ ಚಲನವಲನಗಳ ಬಗ್ಗೆ ಸೇನೆ ಪತ್ತೆ ಮಾಡಿತ್ತು. ಗ್ರೂಪ್ 2 ಎಂದು ಹೇಳುವ ಮತ್ತೊಂದು ಗುಂಪು ಜನವರಿ 1 ರಂದೆ ವಾಯುನೆಲೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದು, ಅದು ಹೇಗೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ನಾಲ್ವರು ಭಯೋತ್ಪಾದಕರ ಚಲನವಲನಗಳ ಬಗ್ಗೆ ವಾಯುನೆಲೆ ಮೇಲೆ ಗಸ್ತು ತಿರುಗುತ್ತಿದ್ದ ಯುದ್ಧ ವಿಮಾನಗಳಲ್ಲಿ ಅಳವಡಿಸಲಾಗಿದ್ದ ಥರ್ಮಲ್ ಡಿವೈಸ್‌ಗಳಿಂದ ಮಾಹಿತಿ ದೊರಕಿತ್ತು.
ಆದರೆ ಇದೇ ಉಪಕರಣಗಳಿಂದ ಆರು ಮಂದಿ ಉಗ್ರರು ಒಟ್ಟಿಗೆ ವಾಯುನೆಲೆಗೆ ಪ್ರವೇಶಿಸಲು ಯತ್ನಿಸಿದ ಚಲನವಲನಗಳ ಬಗ್ಗೆ ಮಾಹಿತಿ ನೀಡಿಲ್ಲ.

Write A Comment