ರಾಷ್ಟ್ರೀಯ

ರೋಹಿತ್‌ ಪ್ರಕರಣ: ಹೈದರಾಬಾದ್‌ ವಿ.ವಿ: ತರಗತಿ ಪುನರಾರಂಭ; ಬೇಡಿಕೆ ಈಡೇರಿಕೆಗೆ ಜೆಎಸಿ 10 ದಿನ ಗಡುವು

Pinterest LinkedIn Tumblr

rohithಹೈದರಾಬಾದ್‌(ಪಿಟಿಐ): ಸಂಶೋಧನಾ ವಿದ್ಯಾರ್ಥಿ ರೋಹಿತ್‌ ವೇಮುಲ ಅವರ ಆತ್ಮಹತ್ಯೆ ಘಟನೆಯಾದ ಎರಡು ವಾರದ ಬಳಿಕ ಹೈದರಾಬಾದ್‌ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸೋಮವಾರದಿಂದ ತರಗತಿಗಳು ಪುನರಾರಂಭವಾಗಿವೆ.

ರೋಹಿತ್ ಆತ್ಮಹತ್ಯೆ ಬಳಿಕ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಅಹೋರಾತ್ರಿ ಪ್ರತಿಭಟನೆ ನಡೆಸಿ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

‘ತರಗತಿಗಳು ಪುನರಾರಂಭವಾಗಿವೆ. ವಿವಿ ಆಡಳಿತ ಸಹ ಕಾರ್ಯನಿರ್ವಹಿಸುತ್ತಿದೆ’ ಎಂದು ಜಂಟಿ ಕ್ರಿಯಾ ಸಮಿತಿ(ಜೆಎಸಿ) ವಕ್ತಾರ ಡಿಕೆನ್ಸ್ ಅವರು ತಿಳಿಸಿದ್ದಾರೆ.

‘ಪ್ರಕರಣದ ಇತ್ಯರ್ಥಕ್ಕೆ ಹತ್ತು ದಿನ ಗಡುವು ನೀಡಲಾಗಿದೆ. ಬಳಿಕ ರ್ಯಾಲಿ, ಪ್ರತಿಭಟನೆ ಹಾಗೂ ವಿಚಾರ ಸಂಕಿರಣಗಳು ಶಾಂತಿಯುತವಾಗಿ ಮುಂದುವರೆಯಲಿವೆ. ವಿ.ವಿ ಹೊರಗೆ ಸಾರ್ವಜನಿಕರೂ ಘಟನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕುಲಪತಿ ಪ್ರೊ.ಅಪ್ಪಾ ರಾವ್‌ ಅವರ ವಜಾ ಮಾಡಬೇಕು ಮತ್ತು ನಮ್ಮ ಇತರ ಬೇಡಿಕೆಯಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದು ಅವರು ತಿಳಿಸಿದ್ದಾರೆ.

Write A Comment