ರಾಷ್ಟ್ರೀಯ

ಅರುಣಾಚಲ ಬಿಕ್ಕಟ್ಟು, ರಾಜ್ಯಪಾಲರಿಗೆ ಮತ್ತೆ ಸುಪ್ರೀಂ ನೊಟೀಸ್

Pinterest LinkedIn Tumblr

supremeನವದೆಹಲಿ: ಅರುಣಾಚಲ ಪ್ರದೇಶದಲ್ಲಿ ಉಲ್ಬಣಿಸಿರುವ ರಾಜಕೀಯ ಬಿಕ್ಕಟ್ಟು ನಾಟಕೀಯ ತಿರುವು ಪಡೆದುಕೊಂಡಿದೆ. ಕೇಂದ್ರದ ಮನವಿ ಎತ್ತಿ ಹಿಡಿದಿರುವ ಸುಪ್ರಿಂ ಕೋರ್ಟ್ ಅರುಣಾಚಲ ಪ್ರದೇಶ ರಾಜ್ಯಪಾಲ ಜ್ಯೋತಿ ಪ್ರಸಾದ ರಾಜ್​ಖೋವಗೆ ನೊಟೀಸ್ ಜಾರಿ ಮಾಡಿದೆ.

361 ನೇ ಕಲಂ ಅನ್ವಯ ರಾಜ್ಯಪಾಲರಾಗಲಿ ಅಥವಾ ರಾಷ್ಟ್ರಪತಿಯಾಗಲಿ ಆಡಳಿತ ಯಂತ್ರ ಪರಿಶೀಲಿಸುವಂತಿಲ್ಲ. ಸಂಪೂರ್ಣ ಅಧಿಕಾರ ಕೋರ್ಟ್ ನಿಭಾಯಿಸುತ್ತದೆ. ಇದರ ಜತೆಗೆ ರಾಷ್ಟ್ರಪತಿ ಆಡಳಿತ ವಿರುದ್ಧ ಅರುಣಾಚಲ ಪ್ರದೇಶ ಮಾಜಿ ಮುಖ್ಯಮಂತ್ರಿ ನಬಾಮ್ ತುಕಿ ಸಲ್ಲಿಸಿದ್ದ ಮೇಲ್ಮನವಿ ವಿರುದ್ಧವೂ ನೊಟೀಸ್ ಜಾರಿ ಮಾಡಿದೆ.

ಜನವರಿ 26 ರಂದು ರಾಜಕೀಯ ಬಿಕ್ಕಟ್ಟಿನಿಂದ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಲು ಕ್ಯಾಬಿನೆಟ್ ಸಲ್ಲಿಸಿದ್ದ ಅರ್ಜಿಯನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಂಗೀಕರಿಸಿದ್ದರು. ಇದರ ವಿರುದ್ಧ ಕಾಂಗ್ರೆಸ್ ಸುಪ್ರಿಂ ಕೋರ್ಟ್​ಗೆ ಮೊರೆ ಹೋಗಿತ್ತು. ರಾಜ್ಯಪಾಲ ರಾಜ್​ಖೋವ ಕೂಡ ಕ್ಯಾಬಿನೇಟ್ ಅಂಗೀಕೃತ ಲಕೋಟೆಯನ್ನು ಕೋರ್ಟ್​ಗೆ ಸಲ್ಲಿಸಿದ್ದರು. ರಾಷ್ಟ್ರಪತಿ ಆಡಳಿತ ಹೇರುವ ಕುರಿತು ಕೇಂದ್ರ ಹಾಗೂ ರಾಜ್ಯಪಾಲರ ವರದಿ ಅನ್ವಯ ನಿರ್ಧರಿಸಲಾಗುವುದು ಎಂದು ಅಟಾರ್ನಿ ಜನರಲ್ ಮುಕುಲ್ ರೋಹಟಗಿ ತಿಳಿಸಿದ್ದಾರೆ.

ಕೋರ್ಟ್ ಅಂಗಳದಲ್ಲಿರುವ ಪ್ರಕರಣದ ವಿಚಾರಣೆ ನಂತರವೇ ಸಮಸ್ಯೆಗೊಂದು ಪರಿಹಾರ ಸಿಗಲಿದೆ.

Write A Comment