ರಾಷ್ಟ್ರೀಯ

ನನ್ನನ್ನು ಬಂಧಿಸಿದರೆ ವೈರಿಗಳಿಗೆ ಉಳಿಗಾಲವಿಲ್ಲ: ಮಸೂದ್ ಅಜರ್

Pinterest LinkedIn Tumblr

Masood-Azharನವದೆಹಲಿ: ಪಠಾಣ್ ಕೋಟ್ ಉಗ್ರ ದಾಳಿ ಪ್ರಕರಣದ ತನಿಖೆ ಚುರುಕು ಪಡೆದುಕೊಳ್ಳುತ್ತಿರುವಂತೆಯೇ ಪರೋಕ್ಷ ಎಚ್ಚರಿಕೆ ನೀಡಿರುವ ಉಗ್ರ ಮಸೂದ್ ಅಜರ್, ನನ್ನನ್ನು ಬಂಧಿಸಿದರೆ ನನ್ನ ಪಡೆ ಖಂಡಿತ ಸುಮ್ಮನೆ ಕೂರುವುದಿಲ್ಲ ಎಂದು ಹೇಳಿದ್ದಾನೆ.

ಪೇಶಾವರ ಮೂಲದ ಜಿಹಾದಿ ಮ್ಯಾಗಜಿನ್ ಅಲ್ ಖ್ವಾಲಂಗೆ ಬರೆದಿರುವ ಲೇಖನದಲ್ಲಿ, ಈ ಬಗ್ಗೆ ಮಾತನಾಡಿರುವ ಮಸೂದ್, “ಒಂದು ವೇಳೆ ನನ್ನನ್ನು ಬಂಧಿಸಿದರೆ.. ನನ್ನ ಪಡೆ ನಮ್ಮ ಶತ್ರುಗಳಿಗೆ ಸಂಭ್ರಮಿಸಲು ಅವಕಾಶ ನೀಡುವುದಿಲ್ಲ. ಏಕೆಂದರೆ ನನ್ನ ಸೇನೆ ಸಾವನ್ನು ಹೆಚ್ಚಾಗಿ ಪ್ರೀತಿಸುತ್ತದೆ ಎಂದು ಹೇಳಿದ್ದಾನೆ.

“ಪಾಕಿಸ್ತಾನ ಸರ್ಕಾರ ಬಲವಂತವಾಗಿ ಉಗ್ರಗಾಮಿ ಸಂಘಟನೆಗಳನ್ನು ಮಟ್ಟಹಾಕಲು ಮುಂದಾದರೆ ತಕ್ಕ ಪ್ರತೀಕಾರ ತೀರಿಸಿಕೊಳ್ಳುತ್ತೇವೆ. ಸಾವನ್ನು ಪ್ರೀತಿಸುವಂತೆ ನಾನು ನನ್ನ ಪಡೆಯನ್ನು ನಾನು ತಯಾರಿಸಿದ್ದೇನೆ. ಭಾರತ ಸರ್ಕಾರದ ಅಣತಿಯಂತೆ ಪಾಕಿಸ್ತಾನ ಜಿಹಾದಿಗಳ ವಿರುದ್ಧ ಕಾರ್ಯಾಚರಣೆ ನಡೆಸಿದರೆ ಅದಕ್ಕೆ ನಿಜಕ್ಕೂ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಮೋಸ್ಟ್ ವಾಂಟೆಡ್ ಉಗ್ರ ಅಜರ್ ಮಸೂದ್ ಹೇಳಿದ್ದಾನೆ.

ಕಾಂದಹಾರ್ ವಿಮಾನ ಅಪಹರಣ ವೇಳೆ ಬಿಡುಗಡೆಯಾಗಿದ್ದ ಮಸೂದ್ ಬಳಿಕ ಜೈಷ್ ಎ ಮೊಹಮ್ಮದ್ ಎಂಬ ಉಗ್ರಗಾಮಿ ಸಂಘಟನೆಯನ್ನು ಸ್ಥಾಪಿಸಿದ್ದ. ತನ್ನ ಸಂದೇಶದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆಯೂ ಮಾತನಾಡಿರುವ ಮಸೂದ್, ಒಂದು ವೇಳೆ ಪಾಕ್ ಸರ್ಕಾರ ಅನ್ಯರ ಮಾತುಕೇಳಿ ಮಸೀದಿ ಮತ್ತು ಜಿಹಾದಿ ಮತ್ತು ಜಿಹಾದಿಗಳ ವಿರುದ್ಧ ಕಾರ್ಯಾಚರಣೆಗಿಳಿದರೆ ದೇಶದ ಭದ್ರತೆಗೆ ಅಪಾಯ ಎದುರಾಗುತ್ತದೆ. ಜಿಹಾದ್ ಬಯಸುವ ಪ್ರತಿಯೊಬ್ಬ ಪ್ರಜೆ ಕೂಡ ಶಸ್ತ್ರಾಸ್ತ್ರ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾನೆ.

Write A Comment