ಜಮ್ಮು (ಪಿಟಿಐ): ಭೀಕರ ಹಿಮಕುಸಿತ ಘಟನೆಯೊಂದರಲ್ಲಿ ಜಮ್ಮು ಮತ್ತು ಕಾಶ್ಮೀರದ ಸಿಯಾಚಿನ್ ಗ್ಲೇಸಿಯರ್‌ನಲ್ಲಿ ನಿಯೋಜನೆಗೊಂಡಿದ್ದ ಹತ್ತು ಸೇನಾ ಸಿಬ್ಬಂದಿ ಹಿಮದಡಿ ಸಿಲುಕಿದ್ದಾರೆ. ಜೆಸಿಒ ದರ್ಜೆಯ ಅಧಿಕಾರಿಯೂ ಇದರಲ್ಲಿ ಸೇರಿದ್ದಾರೆ.
ಲಡಾಖ್ ವಲಯದ 19 ಸಾವಿರ ಅಡಿಗಳ ಎತ್ತರದಲ್ಲಿರುವ ನಾರ್ತರ್ನ್ ಗ್ಲೇಸಿಯರ್ ಸೆಕ್ಟರ್‌ನಲ್ಲಿ ಬುಧವಾರ ನಸುಕಿನಲ್ಲಿ ಈ ದುಘರ್ಟನೆ ನಡೆದಿದೆ ಎಂದು ಉಧಂಪುರ ಮೂಲದ ನಾರ್ತನ್ ಕಮಾಂಡ್ ವಿಭಾಗದ ರಕ್ಷಣಾ ವಕ್ತಾರ ಕರ್ನಲ್ ಎಸ್.ಡಿ.ಗೋಸ್ವಾಮಿ ತಿಳಿಸಿದ್ದಾರೆ.
ಹಿಮದಡಿ ಸಿಲುಕಿದವರಲ್ಲಿ ಒಬ್ಬ ಜೆಸಿಒ ಹಾಗೂ ಇನ್ನುಳಿದ ಒಂಬತ್ತು ಜನರು ವಿವಿಧ ದರ್ಜೆಯ ಯೋಧರಾಗಿದ್ದಾರೆ ಎಂದೂ ಅವರು ಹೇಳಿದ್ದಾರೆ.