ಅಂತರಾಷ್ಟ್ರೀಯ

ಪಠಾಣ್‌ಕೋಟ್ ಮಾದರಿಯ ಇನ್ನಷ್ಟು ದಾಳಿಗೆ ಉಗ್ರ ಸಯೀದ್‌ ಪ್ರಚೋದನೆ

Pinterest LinkedIn Tumblr

saeed-hafiz

ಇಸ್ಲಮಾಬಾದ್, ಫೆ.4: ಪಠಾಣ್‌ಕೋಟ್ ವಾಯುನೆಲೆ ಮೇಲಿನ ದಾಳಿಯನ್ನು ಮುಕ್ತ ಕಂಠದಿಂದ ಪ್ರಶಂಸಿಸಿರುವ ಮುಂಬೈ ಭಯೋತ್ಪಾದಕ ದಾಳಿ ರೂವಾರಿ, ನಿಷೇಧಿತ ಜಮಾತ್-ಉದ್-ದವ (ಜೆಯುಡಿ) ಮುಖ್ಯಸ್ಥ ಹಫೀಜ್ ಸಯೀದ್ ಇಂತಹ ಇನ್ನೂ ಹೆಚ್ಚಿನ ದಾಳಿಗಳನ್ನು ಕೈಗೊಳ್ಳುವಂತೆ ಹುರಿದುಂಬಿಸಿದ್ದಾನೆ.

ಪಾಕ್ ಆಕ್ರಮಿತ ಕಾಶ್ಮೀರ ಪ್ರಾಂತ್ಯದಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಸಯೀದ್, ಏಳು ಮಂದಿ ಭಾರತೀಯ ಯೋಧರನ್ನು ಬಲಿ ತೆಗೆದುಕೊಂಡ ಪಠಾಣ್‌ಕೋಟ್ ದಾಳಿ ಇನ್ನಷ್ಟು ದಾಳಿಗಳಿಗೆ ಆರಂಭವಾಗಬೇಕು ಎಂದಿದ್ದಾನೆ.

8 ಲಕ್ಷ ಭಾರತೀಯ ಸೈನಿಕರು ನಿರಂತರವಾಗಿ ಕಾಶ್ಮೀರಿಗಳ ನರಮೇಧ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪಠಾಣ್‌ಕೋಟ್‌ನಂತಹ ದಾಳಿಗಳನ್ನು ನಡೆಸಲು ಕಾಶ್ಮೀರಿಗಳಿಗೆ ಅಧಿಕಾರವಿಲ್ಲವೇ ಎಂದು ಪ್ರಶ್ನಿಸಿದ ಉಗ್ರ ನಾಯಕ, ನಾವೇಕೆ ಇಂಥ ದಾಳಿ ನಡೆಸಬಾರದು ಎಂದು ಹೇಳಿದ್ದಾನೆ.

ಪಠಾಣ್‌ಕೋಟ್ ವಾಯುನೆಲೆ ಮೇಲಿನ ದಾಳಿ ಹೊಣೆ ಹೊತ್ತಿರುವ ಯುನೈಟೆಡ್ ಜಿಹಾದ್ ಕೌನ್ಸಿಲ್ (ಯುಜೆಸಿ) ನಾಯಕ ಸಯ್ಯದ್ ಸಲಾಹುದ್ದೀನ್‌ನನ್ನೂ ಹಾಡಿಹೊಗಳಿದ್ದಾನೆ. ನೀವು ಒಂದು ದಾಳಿಯನ್ನಷ್ಟೇ ನೋಡಿದ್ದೀರಿ. ಇನ್ನು ಮುಂದೆ ನೋಡಿ ಎಂಬ ಎಚ್ಚರಿಕೆ ನೀಡಿದಾಗ, ನೆರೆದಿದ್ದ ಪ್ರೇಕ್ಷಕರಿಂದ ಕಾಶ್ಮೀರ ವಿಮೋಚನಾ ಸಮರ ಮುಂದುವರೆಯಲಿದೆ. ಜಿಹಾದ್‌ಗೆ ನಾವು ಸಿದ್ಧ ಎಂಬ ಘೋಷಣೆಗಳು ಪ್ರತಿಧ್ವನಿಸಿದವು.

ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪಾಕಿಸ್ಥಾನ ಮೂಲದ ಜೈಷ್-ಎ-ಮೊಹಮ್ಮದ್ ಸಂಘಟನೆ ಇನ್ನೂ ಹೆಚ್ಚಿನ ದಾಳಿಗಳಿಗೆ ಸಿದ್ಧತೆಯಲ್ಲಿ ತೊಡಗಿರಬಹುದು ಎಂಬ ಶಂಕೆಯನ್ನು ಭಾರತೀಯ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ, ಪಂಜಾಬ್‌ನ ಪಠಾಣ್‌ಕೋಟ್ ವಾಯುನೆಲೆಯಲ್ಲಿ ಕಂಡಲ್ಲಿ ಗುಂಡು ಆದೇಶವನ್ನು ಸೇನಾಧಿಕಾರಿಗಳು ನೀಡಿದ್ದಾರೆ.

Write A Comment