ರಾಷ್ಟ್ರೀಯ

ಮಂಜಿನ ಅವಾಂತರದಿಂದ 30 ಕಾರುಗಳು ಜಖಂ : ನಾಲ್ವರ ದಾರುಣ ಸಾವು

Pinterest LinkedIn Tumblr

manjuನವದೆಹಲಿ, ಫೆ.10- ಇಂದು ದಟ್ಟ ಮಂಜು ಆವರಿಸಿಕೊಂಡ ಹಿನ್ನೆಲೆಯಲ್ಲಿ ಸರಣಿ ಅಪಘಾತ ನಡೆದು 30 ಕಾರುಗಳು ಜಖಂಗೊಂಡು, ನಾಲ್ವರು ಸಾವನ್ನಪ್ಪಿರುವ ಘಟನೆ ಹರಿಯಾಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ. ರಸ್ತೆ ಬದಿ ಕೆಟ್ಟು ನಿಂತಿದ್ದ ಲಾರಿಯು ಮಂಜಿನಿಂದ ಕಾಣದಿದ್ದ ಕಾರಣ ಆ ರಸ್ತೆಯಲ್ಲಿ ಬಂದ ಕಾರೊಂದು ರಭಸವಾಗಿ ಡಿಕ್ಕಿ ಹೊಡೆದಿದೆ.

ಈ ಸಂದರ್ಭದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಅವಘಡದಿಂದ ಅದೇ ರಸ್ತೆಯಲ್ಲಿ ಸಾಗುತ್ತಿದ್ದ 30 ಕಾರುಗಳು ಕೂಡ ಒಂದಕ್ಕೊಂದು ಡಿಕ್ಕಿ ಹೊಡೆದುಕೊಂಡು ದೊಡ್ಡ ಅವಘಡ ಸಂಭವಿಸಿದೆ.

ಈ ಅವಘಡ ವೇಳೆ ಸ್ಥಳದಲ್ಲಿದ್ದ ಹೆದ್ದಾರಿ ಗಸ್ತುಪಡೆ ಅಧಿಕಾರಿ ಮನೋಜ್ ಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿ, ಈ ಅವಘಾತಕ್ಕೆ ದಟ್ಟ ಮಂಜೇ ಕಾರಣ ಎಂದು ತಿಳಿಸಿದ್ದಾರೆ. ಟ್ರಾಫಿಕ್ ಜಾಮ್: ಈ ಅವಘಾತದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುವ ವಾಹನಗಳು ಸುಮಾರು 3 ಗಂಟೆಗೂ ಹೆಚ್ಚು ಕಾಲ ಪರಿತಪಿಸುವಂತಾಯಿತು. ತದ ನಂತರ ಕ್ರೇನ್‌ಗಳ ಬಳಕೆಯಿಂದ ವಾಹನಗಳನ್ನು ತೆರವು ಗೊಳಿಸಲಾಯಿತು. ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

Write A Comment