ದೆಹಲಿ: ಇಲ್ಲಿನ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಆವರಣದಲ್ಲಿ ಭಯೋತ್ಪಾದಕ ಅಫ್ಜಲ್ ಗುರು ವನ್ನು ಬೆಂಬಲಿಸಿ ” ಅಫ್ಜಲ್ ಗುರು ದಿನ” ಎಂಬ ರಾಷ್ಟ್ರ ವಿರೋಧಿ ಕಾರ್ಯಕ್ರಮವನ್ನು ಆಚರಿಸಿದ ಬಗ್ಗೆ ತೀವ್ರ ಅಸಂತುಷ್ಟಗೊಂಡಿರುವ ಮಾಜಿ ಸೇನಾಧಿಕಾರಿಗಳ ಗುಂಪೊಂದು ವಿಶ್ವವಿದ್ಯಾಲಯವು ತಮಗೆ ನೀಡಿರುವ ಪದವಿಯನ್ನು ಹಿಂದಿರುಗಿಸುವುದಾಗಿ ಹೇಳುವುದರ ಮೂಲಕ ಹೊಸ ವಿವಾದವೊಂದನ್ನು ಸೃಷ್ಟಿಮಾಡಿದೆ.
ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯವು ದೇಶ ವಿರೋಧಿ ಚಟುವಟಿಕೆಗಳ ಕೇಂದ್ರವಾಗಿ ಪರಿವರ್ತಿತವಾಗುತ್ತಿದ್ದು ‘ಅಫ್ಜಲ್ ಗುರು ದಿನಾಚರಣೆ’ಯಂತಹ ರಾಷ್ಟ್ರವಿರೋಧಿ ಚಟುವಟಿಕೆಗಳು ನಡೆಯುತ್ತಿರುವ ಸಂಸ್ಥೆಯ ಜೊತೆಗೆ ಸಂಬಂಧವಿರಿಸಿಕೊಳ್ಳಲು ತಮಗೆ ಕಷ್ಟವಾಗುತ್ತಿದೆ ಎಂದು ಮಾಜಿ ಸೇನಾಧಿಕಾರಿಗಳು ಜೆಎನ್‌ಯು ವಿಸಿಗೆ ತಿಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.