ರಾಷ್ಟ್ರೀಯ

ಜಾಟ್ ಹಿಂಸಾಚಾರ ₹20ಸಾವಿರ ಕೋಟಿ ನಷ್ಟ

Pinterest LinkedIn Tumblr

haryana-jatನವದೆಹಲಿ (ಪಿಟಿಐ):  ಜಾಟ್‌ ಸಮುದಾಯದ ಪ್ರತಿಭಟನೆ ಯಿಂದಾಗಿ ಹರಿ ಯಾಣಕ್ಕೆ ಅಂದಾಜು ₹ 20 ಸಾವಿರ ಕೋಟಿ ನಷ್ಟವಾಗಿದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಅಸೋಚಾಮ್‌) ತಿಳಿಸಿದೆ.

‘ಪ್ರತಿಭಟನಾಕಾರರು ಬೆಂಕಿ ಹಚ್ಚುವ ಮೂಲಕ ಅಪಾರ ಪ್ರಮಾಣದ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗೆ ಹಾನಿ ಉಂಟು ಮಾಡಿದ್ದಾರೆ. ವ್ಯಾಪಾರ ವಹಿ ವಾಟು, ಸಾರಿಗೆ ವ್ಯವಸ್ಥೆ ಸ್ಥಗಿತಗೊಂಡಿದೆ. ಇದರಿಂದ ರಾಜ್ಯಕ್ಕೆ ₹ 18 ಸಾವಿರ ದಿಂದ ₹ 20 ಸಾವಿ ರದವರೆಗೆ ನಷ್ಟ ಆಗಿದೆ’ ಎಂದು ಅಸೋಚಾಮ್‌ ಭಾನುವಾರ ತಿಳಿಸಿದೆ.

ನಿಯಂತ್ರಣಕ್ಕೆ: ಎರಡು ದಿನಗಳಿಂದ ಹಿಂಸಾ ಚಾರದಿಂದ ನಲುಗಿದ್ದ ಹರಿ ಯಾಣದ ರೊಹ್ಟಕ್‌, ಜಜ್ಜರ್‌ ಮತ್ತು ಜಿಂದ್‌ ನಗರಗಳಲ್ಲಿ ಭಾನುವಾರ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.

ಆದರೆ ಸೋನಿಪತ್‌  ಮತ್ತು ಭಿವಾನಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ಹಿಂಸಾಚಾರ ನಡೆದಿದೆ. ಇಲ್ಲಿ ಪ್ರತಿಭಟನಾಕಾರರು ಎರಡು ಪೊಲೀಸ್‌ ಚೌಕಿ, ಅಂಗಡಿಗಳು ಮತ್ತು ಒಂದು ಎಟಿಎಂ ಕೇಂದ್ರಕ್ಕೆ ಬೆಂಕಿ ಹಚ್ಚಿದ್ದಾರೆ. ಹಾನ್ಸಿ ಜಿಲ್ಲೆಯಲ್ಲಿ ಹಿಂಸಾಚಾರ ಮುಂದುವರಿದ ಕಾರಣ ರಾತ್ರಿಯ ವೇಳೆ ಕರ್ಫ್ಯೂ ಹೇರಲಾಗಿದೆ. ಹಿಂಸಾಚಾರ ಮತ್ತು ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂ ಧಿಸಿದಂತೆ ಪೊಲೀಸರು ಇದುವರೆಗೆ 50 ಜನರನ್ನು ಬಂಧಿಸಿದ್ದಾರೆ.

ಜಾಟ್‌ ಸಮುದಾಯದ ನಾಯಕರು ಮತ್ತು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್‌ ನಡುವಿನ ಮಾತುಕತೆಯಲ್ಲಿ ಸಕಾ ರಾತ್ಮಕ ಫಲಿತಾಂಶ ಹೊರ ಬಂದಿರುವ ಕಾರಣ ಹಿಂಸಾಚಾರ ನಿಲ್ಲುವ ಆಶಾ ಭಾವನೆ ಮೂಡಿದೆ.

ದೆಹಲಿಗೆ ತಟ್ಟಿದ ಬಿಸಿ: ಹರಿಯಾಣದಲ್ಲಿ ನಡೆಯುತ್ತಿರುವ ಪ್ರತಿಭಟನೆಯಿಂದಾಗಿ ನವದೆಹಲಿಯಲ್ಲಿ ನೀರಿಗೆ ತತ್ವಾರ ಉಂಟಾಗಿದೆ. ಹರಿಯಾಣದ ಮುನೆಕ್‌ ಕಾಲುವೆಯಿಂದ ದೆಹಲಿಗೆ ನೀರು ಸರಬರಾಜು ಮಾಡಲಾಗುತ್ತದೆ. ಆದರೆ ಪ್ರತಿಭಟನಾಕಾರರು ದೆಹಲಿಗೆ ನೀರು ಬಿಡುವುದಕ್ಕೆ ತಡೆ ಒಡ್ಡಿದ್ದಾರೆ.

ಇದರಿಂದ ದೆಹಲಿ ಸರ್ಕಾರ ಸೋಮ ವಾರ ಶಾಲೆಗಳಿಗೆ ರಜೆ ಘೋಷಿಸಿದೆ. ನೀರಿನ ಬಳಕೆ ಕಡಿಮೆ ಮಾಡುವಂತೆ ಜನರಲ್ಲಿ ಕೋರಿದೆ. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ನೇತೃತ್ವದಲ್ಲಿ ನಡೆದ ತುರ್ತುಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ದೆಹಲಿಗೆ ಯಾವುದೇ ಅಡೆತಡೆ ಯಿಲ್ಲದೆ ನೀರು ಸರಬರಾಜು ಖಾತರಿ ಪಡಿಸಲು ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕು ಎಂದು ಕೋರಿ ದೆಹಲಿ ಸರ್ಕಾರ ಸುಪ್ರೀಂ ಕೋರ್ಟ್‌ಗೆ  ಅರ್ಜಿ ಸಲ್ಲಿಸಿದೆ. ಇದರ ವಿಚಾರಣೆ ಸೋಮವಾರ ನಡೆಯಲಿದೆ.

ಹೆಚ್ಚುವರಿ ಸಿಬ್ಬಂದಿ ನಿಯೋಜನೆ: ಕೇಂದ್ರ ಸರ್ಕಾರವು ಅರೆ ಸೇನಾ ಪಡೆಯ 1,700 ಸಿಬ್ಬಂದಿಯನ್ನು ಭಾನುವಾರ ಹರಿ ಯಾಣಕ್ಕೆ ಕಳುಹಿಸಿದೆ. ಇದರೊಂದಿಗೆ ಹರಿಯಾಣದಲ್ಲಿರುವ ಕೇಂದ್ರ ಸಶಸ್ತ್ರ ಪಡೆ ಸಿಬ್ಬಂದಿಯ ಒಟ್ಟು ಸಂಖ್ಯೆ 5,000 ಕ್ಕೇರಿದೆ. ‘ಕಳೆದ ಮೂರು ದಿನಗಳಲ್ಲಿ ನಾವು 33 ತುಕಡಿಗಳನ್ನು ಕಳುಹಿಸಿದ್ದೆವು. ಭಾನುವಾರ ಮತ್ತೆ 17 ತುಕಡಿಗಳನ್ನು ಕಳುಹಿಸಲಾಗಿದೆ’ ಎಂದು ಗೃಹ ಸಚಿ ವಾಲಯದ ಹಿರಿಯ ಅಧಿಕಾರಿಯೊ ಬ್ಬರು ತಿಳಿಸಿದ್ದಾರೆ. ಪ್ರತಿ ತುಕಡಿಯಲ್ಲಿ 100 ಸಿಬ್ಬಂದಿ ಇರುತ್ತಾರೆ.

ಉತ್ತರ ಪ್ರದೇಶದಲ್ಲೂ ಪ್ರತಿಭಟನೆ: ಪ್ರತಿಭಟನೆಯು ನೆರೆಯ ರಾಜ್ಯ ಉತ್ತರ ಪ್ರದೇಶದ ಕೆಲವು ಭಾಗಗಳಿಗೂ ವ್ಯಾಪಿ ಸಿದೆ. ಹರಿಯಾಣದ ಗಡಿಗೆ ಹೊಂದಿ ಕೊಂಡಿರುವ ಶುಕೆರ್ತಲ್‌ ಮತ್ತು ಶಹಾ ಪುರ ಪ್ರದೇಶಗಳಲ್ಲಿ ಕೆಲವೆಡೆ ರಸ್ತೆತಡೆ ನಡೆದಿರುವುದು ವರದಿಯಾಗಿದೆ.
‘ದೋಸ್ತಿ’ ಬಸ್‌ ಸೇವೆ ಸ್ಥಗಿತ (ಲಾಹೋರ್ ವರದಿ): ಲಾಹೋರ್‌– ನವದೆಹಲಿ ನಡು ವಿನ ಬಸ್‌ ಸಂಚಾರವನ್ನು ಪಾಕಿಸ್ತಾನ ಅನಿರ್ದಿಷ್ಟ ಅವಧಿಯವರೆಗೆ ಸ್ಥಗಿತಗೊಳಿ ಸಿದೆ. ‘ಹರಿಯಾಣವು ಸಹಜ ಸ್ಥಿತಿಗೆ ಮರಳುವವರೆಗೆ ಬಸ್‌ ಸೇವೆ ಸ್ಥಗಿತಗೊಳಿ ಸುವಂತೆ ಭಾರತ ಸರ್ಕಾರ ಕೋರಿದೆ. ಆದ್ದರಿಂದ ದೋಸ್ತಿ ಬಸ್‌ ಸೇವೆ ನಿಲ್ಲಿಸ ಲಾಗಿದೆ’ ಎಂದು ಪಾಕಿಸ್ತಾನ ಪ್ರವಾ ಸೋದ್ಯಮ ಅಭಿವೃದ್ದಿ ನಿಗಮದ ಮುಖ್ಯಸ್ಥ ಖಾಲಿದ್‌ ತಿಳಿಸಿದ್ದಾರೆ.

ಪ್ರಧಾನಿಗೆ ಮನವಿ:  ಕನ್ಹಯ್ಯಾ ಪ್ರಕರಣದಲ್ಲಿ ಪ್ರಧಾನಿ ಮೋದಿ ಅವರು ಮೌನ ಮುರಿಯಬೇಕು ಮತ್ತು  ನ್ಯಾಯ ದೊರಕಿಸಿಕೊಡಬೇಕು  ಎಂದು ಕನ್ಹಯ್ಯಾ ಕುಟುಂಬದವರು ಕೋರಿದ್ದಾರೆ.

ವಿಮಾನ ಟಿಕೆಟ್‌ ದರ ಗಗನಕ್ಕೆ

ನವದೆಹಲಿ (ಪಿಟಿಐ): ಜಾಟ್‌ ಪ್ರತಿ ಭಟನೆಯ ಕಾರಣ ರೈಲು ಮತ್ತು ಇತರ ವಾಹನಗಳ ಸಂಚಾರಕ್ಕೆ ಅಡ್ಡಿ ಯಾಗಿವೆ. ಇದರಿಂದ ವಿಮಾನ ಪ್ರಯಾಣದ ದರ ಗಗನಕ್ಕೇರಿದೆ. ನವದೆಹಲಿ–ಚಂಡೀಗಡ ನಡುವಿನ ವಿಮಾನ ಪ್ರಯಾಣದ ದರ ಸಾಮಾನ್ಯ ವಾಗಿ ₹3,000 ರಿಂದ ₹ 4,000 ಇರುವುದು. ಇದೀಗ ಕೆಲವು ವಿಮಾನ ಯಾನ ಸಂಸ್ಥೆಗಳು ಟಿಕೆಟ್‌ ಬೆಲೆಯನ್ನು ₹ 20 ಸಾವಿರದವರೆಗೆ ಹೆಚ್ಚಿಸಿವೆ.

Write A Comment