ರಾಷ್ಟ್ರೀಯ

ಮೋದಿ ಸೂಟ್ ಖರೀದಿಸಿದ್ದ ಉದ್ಯಮಿಯಿಂದ 10,000 ಹೆಣ್ಣು ಮಕ್ಕಳಿಗೆ 200 ಕೋಟಿ ರೂಪಾಯಿ ದಾನ

Pinterest LinkedIn Tumblr

modi-patel

ಆಗ್ರಾ: ನರೇಂದ್ರ ದಾಮೋದರ ದಾಸ್ ಮೋದಿ ಎಂದು ಬರೆದಿದ್ದ ಅಪರೂಪದ ಮೋದಿ ಅವರ ಉಡುಪನ್ನು ಖರೀದಿಸಿದ್ದ ಉದ್ಯಮಿ ಪಟೇಲ್ ಅಕಾ ಬಾದಶಾ ಬಡ ಹೆಣ್ಣು ಮಕ್ಕಳಿಗಾಗಿ ಸುಮಾರು 200 ಕೋಟಿ ರು ಹಣವನ್ನು ದಾನ ಮಾಡಿದ್ದಾರೆ. ದೇಶದ 10,000 ಹೆಣ್ಮಕ್ಕಳಿಗೆ ತಲಾ 2 ಲಕ್ಷ ರು ನಂತೆ 200 ಕೋಟಿ ರೂಪಾಯಿಗಳನ್ನು ದಾನವಾಗಿ ನೀಡುವುದಾಗಿ ಪ್ರಕಟಿಸಿದ್ದಾರೆ.

ಪಟೇಲ್ ಅಕಾ ಬಾದಶಾ ಸೂರತ್​ನ ವಜ್ರದ ದೊರೆ, ಕಟ್ಟಡ ನಿರ್ಮಾಣಗಾರ, ಖಾಸಗಿ ಏರ್​ಲೈನ್ ಮಾಲೀಕ ರಾಗಿದ್ದಾರೆ. ಅವರು ವಾತ್ಸಲ್ಯ ಗ್ರಾಮ ವೃಂದಾವನಕ್ಕೆ ಭೇಟಿ ನೀಡಿದ ಕಾಲದಲ್ಲಿ ಪ್ರಕಟಣೆ ಮಾಡಿದ್ದಾರೆ. ಮಾರ್ಚ್ 13ರಂದು ಸೂರತ್​ನಲ್ಲಿ ಈ ಕಾರ್ಯಕ್ರಮಕ್ಕೆ ತಾವು ಚಾಲನೆ ನೀಡಲಿದ್ದು ರಾಷ್ಟ್ರಾದ್ಯಂತ ಆಯ್ಕೆ ಮಾಡಲಾದ 10,000 ಬಾಲಕಿಯರ ಹೆತ್ತವರಿಗೆ ತಲಾ 2 ಲಕ್ಷ ರೂಪಾಯಿಗಳನ್ನು ನೀಡಲಾಗುವುದು ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರದ ‘ಭೇಟಿ ಬಚಾವೊ’ಭೇಟಿ ಪಡಾವೋ ಕಾರ್ಯಕ್ರಮದಿಂದ ಪ್ರೇರಿತರಾಗಿರುವ ಅವರು ಇದು ತಮ್ಮ ಒಂದು ಪುಟ್ಟ ಕೊಡುಗೆ ಎಂದು ಹೇಳಿದ್ದಾರೆ. ಕಳೆದ ವರ್ಷ ಗುಜರಾತಿನ ಪಾಟಿದಾರ್ ಸಮುದಾಯ 5000 ನವಜಾತ ಹೆಣ್ಮಕ್ಕಳಿಗೆ ತಲಾ 2 ಲಕ್ಷ ರೂಪಾಯಿಗಳ ಬಾಂಡ್ ಕೊಡುಗೆಯನ್ನು ಬಾದಶಾ ಪ್ರಕಟಿಸಿದ್ದರು.

Write A Comment