ದೆಹಲಿ: ಸಂಸತ್ತಿನಲ್ಲಿ ಇಂದಿನಿಂದ ನಿರ್ಣಾಯಕ ಬಜೆಟ್ ಅಧಿವೇಶನ ಆರಂಭವಾಗಿದ್ದು, ಜೆಎನ್ ಯು ವಿವಾದ ಹಾಗೂ ಜಾಟ್ ಚಳುವಳಿಯ ಕುರಿತು ವಿಸ್ತೃತ ಚರ್ಚೆ ನಡೆಯಲಿ ಎಂದು ಪ್ರಧಾನಿ ನರೇಂದ್ರ ಮೋದಿ ಹಾರೈಸಿದ್ದಾರೆ.
ಚರ್ಚೆಯ ಮೂಲಕ ಸರ್ಕಾರ ಲೋಪದೋಷಗಳು ಬೆಳಕಿಗೆ ಬರಲಿ. ಸರ್ಕಾರದ ಬಗ್ಗೆ ಟೀಕೆ ಟಿಪ್ಪಣಿಗಳು ಪ್ರಬಲವಾಗಿದ್ದಲ್ಲಿ ಮಾತ್ರ ನಮ್ಮ ಪ್ರಜಾಪ್ರಭುತ್ವ ಬಲವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಮುಂಗಡಪತ್ರ ಅಧಿವೇಶನವು ಫಲಪ್ರದವಾಗುವುದು ಮತ್ತು ಧನಾತ್ಮಕವಾಗಿ ಚರ್ಚೆಗಳು ನಡೆಯಲಿ ಎಂದು ಪ್ರಧಾನಿ ಹಾರೈಸಿದ್ದಾರೆ.