ನವದೆಹಲಿ: ರಾ, ಗುಪ್ತಚರ ದಳ (ಐಬಿ) ಮತ್ತು ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ (ಎನ್ಟಿಆರ್ಒ) ಇತ್ಯಾದಿ ಸಂಸ್ಥೆಗಳನ್ನು ಉತ್ತರದಾಯಿಗಳನ್ನಾಗಿ ಮಾಡಬೇಕು ಎಂದು ಕೋರಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಆಲಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ.
’ಗುಪ್ತಚರ ಸಂಸ್ಥೆಗಳ ಕ್ಷೇತ್ರಕ್ಕೆ ನ್ಯಾಯಾಲಯ ಪ್ರವೇಶಿಸಬೇಕು ಎಂದು ನಾವು ಭಾವಿಸುವುದಿಲ್ಲ. ಏಕೆಂದರೆ ಇದು ರಾಷ್ಟ್ರದ ಭದ್ರತೆಗೆ ಸಂಬಂಧ ಪಟ್ಟ ವಿಚಾರ’ ಎಂದು ಸುಪ್ರೀಂಕೋರ್ಟ್ ಹೇಳಿದೆ.