ಮುಂಬೈ: ಚೆಕ್ ಬೌನ್ಸ್ ಗೆ ಸಂಬಂಧಿಸಿದ 18 ವರ್ಷದ ಹಳೆಯ ಪ್ರಕರಣವೊಂದರಲ್ಲಿ ಬಾಲಿವುಡ್ ಹಿರಿಯ ನಟ ದಿಲಿಪ್ ಕುಮಾರ್ ಅವರು ತಪ್ಪಿತಸ್ಥ ಅಲ್ಲ ಎಂದು ಮುಂಬೈ ಕೋರ್ಟ್ ತೀರ್ಪು ನೀಡಿದೆ. ಈ ವೇಳೆ 94 ವರ್ಷದ ದಿಲಿಪ್ ಕುಮಾರ್ ಅವರು ಕೋರ್ಟ್ ನಲ್ಲಿ ಹಾಜರಿರಲಿಲ್ಲ.
1998ರಲ್ಲಿ ದಿಲಿಪ್ ಕುಮಾರ್ ಅವರು ಗೌರವಾಧ್ಯಕ್ಷರಾಗಿದ್ದ ಕೋಲ್ಕತಾ ಮೂಲದ ಜಿಕೆ ಎಕ್ಸಿಮ್ ಇಂಡಿಯಾ ಪ್ರೈ, ಲಿ. ಕಂಪನಿ, ಬಾಲಿವುಡ್ ನಟ ಸೇರಿದಂತೆ ಇತರೆ ಮೂವರು ನಿರ್ದೇಶಕರ ವಿರುದ್ಧ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದರು. ಪ್ರಕರಣದ ಸುದೀರ್ಘ ವಿಚಾರಣೆ ಬಳಿಕ ಇಂದು ತೀರ್ಪು ನೀಡಿರುವ ಕೋರ್ಟ್, ದಿಲಿಪ್ ಕುಮಾರ್ ಹಾಗೂ ಮತ್ತೊಬ್ಬರನ್ನು ಆರೋಪ ಮುಕ್ತಗೊಳಿಸಿ, ಇತರೆ ಇಬ್ಬರು ನಿರ್ದೇಶಕರು ತಪ್ಪಿತಸ್ಥರು ಎಂದು ಹೇಳಿದೆ.
ದಿಲಿಪ್ ಕುಮಾರ್ ಪತ್ನಿ ಸೈರಾ ಬಾನು ಅವರು ನಿನ್ನೆ ಟ್ವಿಟ್ ಮಾಡಿ, ನಟನಿಗಾಗಿ ಪ್ರಾರ್ಥನೆ ಮಾಡಿ ಮತ್ತು ಬೆಂಬಲ ನೀಡಿ ಎಂದು ಕೇಳಿಕೊಂಡಿದ್ದರು. ಅಲ್ಲದೆ ತಮ್ಮ ಪತಿ ಗಂಭೀರ ಆರೋಗ್ಯ ಸಮಸ್ಯಯಿಂದ ಬಳಲುತ್ತಿದ್ದರೂ ಪ್ರಕರಣದ ವಿಚಾರಣೆ ಮುಂದೂಡುವಂತೆ ಯಾವತ್ತು ಕೇಳಿಕೊಂಡಿರಲಿಲ್ಲ ಎಂದು ಹೇಳಿದ್ದಾರೆ.