ರಾಷ್ಟ್ರೀಯ

ಪೇದೆ ಮೇಲೆ ಹಲ್ಲೆ: ಸಮಾಜವಾದಿ ಪಕ್ಷದ ಮುಖಂಡರ ಮಗ ಬಂಧನ

Pinterest LinkedIn Tumblr

arrestಮೀರತ್: ಪೇದೆ ಮೇಲೆ ಹಲ್ಲೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ನಾಯಕಿ ಸಂಗೀತಾ ರಾಹುಲ್ ಅವರ ಪುತ್ರ ನಿತಿನ್ ರಾಹುಲ್ ಮತ್ತು ಆತನ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದಾರೆ.

ಟಿಪಿ ನಗರದಲ್ಲಿ ವಾಹನ ತಪಾಸಣೆ ವೇಳೆ ನಿತಿನ್ ರಾಹುಲ್ ಕಾರನ್ನು ಪೊಲೀಸ್ ಕಾನ್ಸ್ ಟೇಬಲ್ ಸರ್ವೇಶ್ ಯಾದವ್ ತಡೆದು ನಿಲ್ಲಿಸಿದ್ದಾರೆ. ಈ ವೇಳೆ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ ನಿತಿನ್ ಮತ್ತು ಆತನ ಸ್ನೇಹಿತ ವಿಕಾಸ್ ಗುಪ್ತಾ ಪೇದೆ ಮೇಲೆ ಹಲ್ಲೆ ಮಾಡಿದ್ದಾರೆ.

ಈ ಹಿನ್ನಲೆಯಲ್ಲಿ ಅವರಿಬ್ಬರನ್ನು ಪೊಲೀಸರು ಬಂಧಿಸಿ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ವಿಷಯ ತಿಳಿದ ಸಂಗೀತಾ ರಾಹುಲ್ ಮತ್ತು ಅವರ ಬೆಂಬಲಿಗರು ಠಾಣೆಗೆ ಆಗಮಿಸಿ, ಪೇದೆ ಯಾದವ್ ಅವರ ಮೇಲೆ ಮತ್ತೊಮ್ಮೆ ಹಲ್ಲೆ ನಡೆಸಿದ್ದಾರೆ.

ಈ ಹಿನ್ನಲೆಯಲ್ಲಿ 12ಕ್ಕೂ ಹೆಚ್ಚು ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದು, ಬಂಧಿತ ನಿತಿನ್ ಮತ್ತು ವಿಕಾಸ್ ಗುಪ್ತಾನನ್ನು ಕೋರ್ಟ್ ಗೆ ಹಾಜರು ಪಡಿಸಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Write A Comment