ಮನೋರಂಜನೆ

2019ರ ಏಕದಿನ ವಿಶ್ವಕಪ್ ಟೂರ್ನಿವರೆಗೂ ಧೋನಿ ತಂಡದಲ್ಲಿ ಮುನ್ನಡೆಯಲಿ: ಸೆಹ್ವಾಗ್

Pinterest LinkedIn Tumblr

Mahendra Singh Dhoni-Virender Sehwag

ನವದೆಹಲಿ: ಬೌಲರ್ ಗಳಿಗೆ ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಸಿಂಹಸ್ವಪ್ನರಾಗಿದ್ದು, ಕಳೆದ ಎರಡು ಮೂರು ವರ್ಷಗಳಿಂದ ಭಾರತಕ್ಕೆ ಸತತ ಜಯ ತಂದುಕೊಟ್ಟಿದ್ದಾರೆ ಎಂದು ಮಾಜಿ ಕ್ರಿಕೆಟಿಂಗ ವಿರೇಂದ್ರ ಸೆಹ್ವಾಗ್ ಹೇಳಿದ್ದಾರೆ.

ಟೀಂ ಇಂಡಿಯಾದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಆಡುವ ಧೋನಿ ಬೌಲರ್ ಗಳನ್ನು ಕಾಡುತ್ತಿದ್ದಾರೆ. ಇತ್ತೀಚೆಗೆ ನಡೆದ ಏಷ್ಯಾ ಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಧೋನಿ ಭರ್ಜರಿ ಸಿಕ್ಸರ್ ಬೌಂಡರಿಗಳಿಂದ ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದಾರೆ ಎಂದು ಸೆಹ್ವಾಗ್ ಹೇಳಿದ್ದಾರೆ.

ನಾಲ್ಕನೇ ಕ್ರಮಾಂಕದಲ್ಲಿ ಧೋನಿ ಆಡುವುದು ತಂಡಕ್ಕೆ ಹೆಚ್ಚು ಪ್ರಯೋಜನ. ವೇಗಿ ಹಾಗೂ ಸ್ಪಿನ್ ದಾಳಿಯನ್ನು ಸಲೀಸಾಗಿ ಎದುರಿಸುವ ಸಾಮಥ್ಯ ಧೋನಿಗಿದೆ. ಹೀಗಾಗಿ 2019ರ ಏಕದಿನ ವಿಶ್ವಕಪ್ ಟೂರ್ನಿವರೆಗೂ ಧೋನಿ ತಂಡದಲ್ಲಿ ಆಡಬೇಕಿದೆ ಎಂದು ಸೆಹ್ವಾಗ್ ಹೇಳಿದ್ದಾರೆ.

34 ವರ್ಷದ ಧೋನಿ ಕಳೆದ ಹಲವು ತಿಂಗಳಿನಿಂದ ನಿವೃತ್ತಿ ಪ್ರಶ್ನೆಗಳು ಹೇಳುತ್ತಿವೆ. ಈ ಮಧ್ಯೆ ತಾನು ಈಗಲೇ ನಿವೃತ್ತಿ ಘೋಷಿಸುವುದಿಲ್ಲ ಎಂದು ಸ್ವತಃ ಧೋನಿ ಅವರೇ ಸ್ಪಷ್ಟಪಡಿಸಿದ್ದಾರೆ ಎಂದರು.

Write A Comment