ನವದೆಹಲಿ: ಆಂಧ್ರಪ್ರದೇಶದ ಹೊಸ ರಾಜಧಾನಿ ಅಮರಾವತಿ ನಿರ್ಮಾಣಕ್ಕೆ ಹೊಸ ಕಂಟಕವೊಂದು ಎದುರಾಗಿದ್ದು, ಈ ರಾಜಧಾನಿ ಯೋಜನೆಗೆ ನೀಡಲಾಗಿರುವ ಪರಿಸರ ಇಲಾಖೆ ಅಂಗೀಕಾರ ಕ್ರಮ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ಬರುವ ಏಪ್ರಿಲ್ ನಾಲ್ಕರಂದು ನಡೆಯಲಿದೆ.
ಹೊಸ ರಾಜಧಾನಿ ನಿರ್ಮಾಣಕ್ಕೆ ಪರಿಸರ ಇಲಾಖೆ ನೀಡಿರುವ ಅನುಮತಿಯನ್ನೂ ಪ್ರಶ್ನಿಸಿ ಕೆಲವು ವಾರಗಳ ಹಿಂದೆ ಮಾಜಿ ಐ.ಎ.ಎಸ್. ಅಧಿಕಾರಿ ಇ.ಎ.ಎಸ್. ಶರ್ಮಾ ಅವರು ಹಸಿರು ನ್ಯಾಯಾಧೀಕರಣದ ಮೊರೆ ಹೋಗಿದ್ದರು.
ಆಂಧ್ರಪ್ರದೇಶ ಸರಕಾರದ ಪರಿಸರ ಒತ್ತಡ ಅಂದಾಜು ಪ್ರಾಧಿಕಾರ ಈ ಸಂಬಂಧ ನೀಡಿರುವ ಪರಿಸರ ಅಂಗೀಕಾರ ಕ್ರಮವನ್ನೂ ರದ್ದುಪಡಿಸುವಂತೆ ಅವರು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣಕ್ಕೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯಲ್ಲಿ ಕೇಂದ್ರ ಸರಕಾರ, ರಾಷ್ಟ್ರೀಯ ರಾಜಧಾನಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಆಂಧ್ರಪ್ರದೇಶ ಪರಿಸರ ಒತ್ತಡ ಅಂದಾಜು ಪ್ರಾಧಿಕಾರ ಹಾಗೂ ಆಂಧ್ರಪ್ರದೇಶ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗಳನ್ನು ಪ್ರತಿವಾದಿಗಳನ್ನಾಗಿ ಹೆಸರಿಸಲಾಗಿದೆ.