ಅಂತರಾಷ್ಟ್ರೀಯ

ಪಾಕ್ ಕ್ರಿಕೆಟ್ ಪ್ರೇಮಿಗಳಿಗೆ ವೀಸಾ ನೀತಿ ಸಡಿಲಿಗೆ ಕ್ರಮ

Pinterest LinkedIn Tumblr
Photograph of a passport with airplane boarding pass. isolated on white.
Photograph of a passport with airplane boarding pass. isolated on white.

ನವದೆಹಲಿ: ಮೋದಿ ಸರಕಾರ ಪಾಕಿಸ್ತಾನದೊಂದಿಗೆ ಈಗ ಕ್ರಿಕೆಟ್ ರಾಜತಾಂತ್ರಿಕ ವ್ಯವಹಾರಕ್ಕೆ ಮುಂದಾಗಿದೆ. ಟಿ-20 ವಿಶ್ವಕಪ್ ಕ್ರಿಕೆಟ್ ಪಂದ್ಯ ನೋಡಲು ಪಾಕಿಸ್ತಾನದಿಂದ ಆಗಮಿಸುವ ಕ್ರಿಕೆಟ್ ಅಭಿಮಾನಿಗಳಿಗೆ ವೀಸಾ ನೀಡಿಕೆಯಲ್ಲಿ ಹಲವು ರಿಯಾಯಿತಿ ತೋರಿವೆ.

ಈಗಿನ ಹೊಸ ವೀಸಾ ನೀತಿಯಂತೆ ಪಾಕಿಸ್ತಾನ ಸೇರಿದಂತೆ ನೆರೆ ರಾಷ್ಟ್ರಗಳಿಂದ ಆಗಮಿಸುವ ಕ್ರಿಕೆಟ್ ಅಭಿಮಾನಿಗಳು, ಮತ್ತೆ ತಮ್ಮ ದೇಶಕ್ಕೆ ಹಿಂದಿರುಗುವ ವಿಮಾನ ಟಿಕೆಟ್ ವೀಸಾದೊಂದಿಗೆ ಲಗ್ಗತ್ತಿಸುವ ಹಾಗಿಲ್ಲ. ಬರುವ ಟಿಕೆಟ್‌ನಲ್ಲಿಯ ವಿಳಾಸ ಅರ್ಜಿದಾರರ ವಿಳಾಸದೊಂದಿಗೆ ತಾಳೆಯಾದರೆ ಸಾಕು.

ಹಾಗೆಯೇ 65 ವರ್ಷಕ್ಕೆ ಮೇಲ್ಪಟ್ಟವರು ಮತ್ತು 15 ವರ್ಷದ ಕೆಳಗಿನವರು ಠಾಣೆಗೆ ಹೋಗಿ ವರದಿ ಮಾಡಿಕೊಳ್ಳುವುದಕ್ಕೂ ವಿನಾಯಿತಿ ನೀಡಲಾಗಿದೆ. `ಸುಮಾರು 1000 ವೀಸಾಗಳನ್ನು ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಗಳಿಗೆ ನೀಡಲಾಗಿದೆ.

ವೀಸಾ ನೀಡಿಕೆಯಲ್ಲಿ ಕೆಲ ರಿಯಾಯಿತಿಗಳನ್ನು ತೋರಲಾಗಿದೆ. ಆದರೂ ಹೆಚ್ಚುಕಮ್ಮಿ 2012ರಲ್ಲಿಯ ವೀಸಾ ನಿಯಮಾವಳಿಗಳನ್ನೆ ಪಾಲಿಸಲಾಗಿದೆ ಎಂದು ವಿದೇಶಾಂಗ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಇನ್ನೊಂದು ವಿನಾಯಿತಿ ಎಂದರೆ ವೀಸಾ ಅವಧಿ ಕ್ರಿಕೆಟ್ ಪಂದ್ಯಗಳು ಮುಗಿಯುವವರೆಗೆ ಮಾತ್ರ ಅಲ್ಲಿ ಬದಲಾಗಿ ಅವರು ಮರು ಪ್ರಯಾಣಕ್ಕೆ ವಿಮಾನ ಹತ್ತುವವರೆಗೂ ಇರುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Write A Comment