ನವದೆಹಲಿ: ಮದ್ಯದ ದೊರೆ ಮಲ್ಯಗೆ 9000 ಕೋಟಿ ಸಾಲ ನೀಡಿರುವ ಸಾರ್ವಜನಿಕ ವಲಯದ 17 ಬ್ಯಾಂಕುಗಳು ಈಗ ಕಣ್ಣು ಕಣ್ಣು ಬಿಡುತ್ತಿವೆ.
ಸಾಲ ನೀಡುವಾಗ ಬ್ಯಾಂಕುಗಳು ಮಲ್ಯ ಅವರಿಗೆ ಕೇಂದ್ರ ಚಿರಾಸ್ತಿ ಮತ್ತು ಅವರ ಷೇರುಗಳ ಒಟ್ಟು ಮೊತ್ತವನ್ನು ಮುಟ್ಟುಗೋಲು ಹಾಕಿಕೊಂಡು ಮಾರಿದರು ಸಾಲದ ಮೊತ್ತಕ್ಕೆ ಸಾಲುವುದಿಲ್ಲ.
ಹಾಗೆಯೇ, ಹಾಗೆ ಎಲ್ಲವನ್ನು ಮುಟ್ಟುಗೋಲು ಹಾಕಿಕೊಳ್ಳಲು ಹಾಗೂ ಮಾರಾಟ ಮಾಡಲು ಸಾಧ್ಯವಿಲ್ಲ.
ಸದ್ಯಕ್ಕೆ ಈ ಬ್ಯಾಂಕು ಸಾಲ ವಸೂಲಿಗಾಗಿ ಕಿಂಗ್ ಫಿಷರ್ ಏರ್‌ಲೈನ್ಸ್‌ಗೆ ಸೇರಿದ 9 ಟ್ರೇಡ್ ಮಾರ್ಕ್‌ಗಳನ್ನು ಮುಟ್ಟುಗೋಲು ಹಾಕಿಕೊಂಡಿವೆ. ಇವುಗಳಲ್ಲಿ ಹಲವನ್ನು ಮಾರಾಟಕ್ಕೂ ಈಗಿನ ಸ್ಥಿತಿಯಲ್ಲಿ ಬ್ಯಾಂಕುಗಳು ಕೈಹಾಕುವ ಸಂಭವ ಇಲ್ಲ. ಕಾರಣ ಬ್ಯಾಂಕುಗಳು ಮಾರಾಟಕ್ಕೆ ಮುಂದುವರೆದು ಇದರ ವಿರುದ್ಧ ಮಲ್ಯ ನ್ಯಾಯಾಲಯ ಮೆಟ್ಟಿಲೇರುತ್ತಾರೆ.
`ಸಾಲಕ್ಕಾಗಿ ಬ್ಯಾಂಕ್‌ಗಳಲ್ಲಿ ಷೇರುಗಳನ್ನು ಒತ್ತೆ ಇಟ್ಟಿದ್ದೇನೆ. ಅವುಗಳ ಮಾರಾಟಕ್ಕೆ ಬ್ಯಾಂಕುಗಳು ಯತ್ನಿಸಿದರೆ ಕಾನೂನುಕ್ರಮಕ್ಕೆ ಮುಂದಾಗುವುದಾಗಿ ಮಲ್ಯ ಅವರ ವಕೀಲರ ತಂಡ ಈಗಲೇ ಹೇಳಿದೆ.
ಸಾಲಕ್ಕಾಗಿ, ವಸೂಲಿಗಾಗಿ ಬ್ಯಾಂಕುಗಳು ಕಣ್ಣು ಮುಂದೆ ಕಿಂಗ್ ಫಿಷರ್ ಕಾರ್ಪೊರೇಟ್ ಕೇಂದ್ರಗಳು, ಅದರ ಖಾಸಗಿ ಜೆಟ್‌ಗಳು, ಯಾಟ್ಚ್‌ಗಳು ಕಾಣುತ್ತಿವೆ. ಇವುಗಳ ಮೊತ್ತ ವಸೂಲಾಗಬೇಕಿರುವ ಸಾಲದ ಮೊತ್ತದ ಮುಂದೆ ಏನೇನೂ ಅಲ್ಲ. ಜೊತೆಗೆ ಮಲ್ಯರ ಗುಪ್ತ ಆಸ್ತಿಗಳತ್ತ ಘೋಷಣೆಯಾಗಬೇಕು ಎಂದು ಬ್ಯಾಂಕುಗಳು ನ್ಯಾಯಾಲಯದ ಮೊರೆ ಹೋಗಿವೆ. ಈಗ ಇದೆಲ್ಲ ಸಾಲ ರಗಳೆಯನ್ನು ಇಲ್ಲೇ ಬಿಟ್ಟು ಮಲ್ಯ ಲಂಡನ್ ಸೇರಿದ್ದಾರೆ. ಇಲ್ಲೇ ಇದ್ದಿದ್ದರೆ, ಸಾಲ ವಸೂಲಿ ಸುಲಭವಾಗುತ್ತಿತ್ತು.
ಕಾನೂನು ಕ್ರಮ ಜರುಗಿಸುವುದು ಸುಲಭವಾಗಿತ್ತು. ಈಗ ಲಂಡನ್‌ನಲ್ಲಿರುವ ಮಲ್ಯರನ್ನು ಭಾರತಕ್ಕೆ ಕರೆ ತರಬೇಕಾದರೂ, ಅಥವಾ ಇಲ್ಲಿಂದಲೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಾದರೂ ಬ್ರಿಟನ್‌ನ ಕಾನೂನು ನಿಯಮಗಳನ್ನು ಪಾಲಿಸಬೇಕು. ಅಲ್ಲಿಯ ನಿಯಮಾವಳಿಗಳು ಎಲ್ಲವನ್ನು ಕಾನೂನು ಚೌಕಟ್ಟಿನಲ್ಲಿಯೆ ಪರಿಶೀಲಿಸುತ್ತವೆ. ಹೀಗಾಗಿ ಮಲ್ಯರನ್ನು ಈಗ ಸುಲಭವಾಗಿ ಅಲುಗಾಡಿಸಲು ಸಾಧ್ಯವಿಲ್ಲ. ಹಾಗೆ ಮಾಡಲು ಅತಿ ದೀರ್ಘಕಾಲದ ಕಾನೂನು ಹೋರಾಟವನ್ನೆ ಮಾಡಬೇಕಾಗುತ್ತದೆ.