ರಾಷ್ಟ್ರೀಯ

ವಿಜಯ್ ಮಲ್ಯ ವಿರುದ್ಧದ ಮೊದಲ ಬಂಧನ ಆದೇಶ ಆಕಸ್ಮಿಕವಾಗಿತ್ತು : ಸಿಬಿಐ

Pinterest LinkedIn Tumblr

vijaya

ನವದೆಹಲಿ: ಬ್ಯಾಂಕ್ ಗಳಿಂದ ಪಡೆದಿರುವ ಬೃಹತ್ ಮೊತ್ತದ ಸಾಲವನ್ನು ತೀರಿಸಲಾಗದೇ ಸುಸ್ತಿದಾರರಾಗಿರುವ ಕಿಂಗ್‌ಫಿಷರ್‌ ಏರ್‌ಲೈನ್ಸ್‌ ಮಾಲೀಕ ವಿಜಯ್‌ ಮಲ್ಯ ವಿದೇಶಕ್ಕೆ ಹೋಗಲು ಅವಕಾಶ ನೀಡಿದ ಆರೋಪ ಎದುರಿಸುತ್ತಿರುವ ಸಿಬಿಐ ಈಗ ಮತ್ತೊಂದು ಸಮಸ್ಯೆಗೆ ಸಿಲುಕಿದೆ.

ವಿಜಯ್ ಮಲ್ಯ ವಿರುದ್ಧ ಹೊರಡಿಸಲಾಗಿದ್ದ ಮೊದಲನೇ ಬಂಧನ ಆದೇಶ ಆಕಸ್ಮಿಕವಾಗಿ( ತಪ್ಪಾಗಿ) ಕಳಿಸಲಾಗಿತ್ತು ಎಂದು ಸಿಬಿಐ ಹೇಳಿದೆ. ಸಿಬಿಐ ನಿಂದ ವಿಜಯ್ ಮಲ್ಯ ವಿರುದ್ಧ ಬಂಧನ ಆದೇಶ ಹೊರಡಿಸಿದ್ದು ತಪ್ಪಾಗಿತ್ತು ಎಂದು ಸಿಬಿಐ ನ ಅಧಿಕಾರಿಯೊಬ್ಬರು ಹೇಳಿಕೆ ನೀಡಿದ್ದಾರೆ.

ಡಿ.9 , 10 ರಂದು ದೆಹಲಿಯಲ್ಲಿ ಹಾಗೂ ಡಿ.12 ರಂದು ಮುಂಬೈ ನಲ್ಲಿ ಮಲ್ಯ ತನಿಖಾ ತಂಡದ ಎದುರು ಹಾಜರಾಗಿದ್ದರು. ಇದಾದ ಬಳಿಕ ಸಿಬಿಐ ಮಲ್ಯ ವಿರುದ್ಧ ಹೊರಡಿಸಿದ್ದ ಲುಕ್ ಔಟ್ ನೋಟಿಸ್( ಬಂಧನ ಆದೇಶ)ದ ಸ್ವರೂಪವನ್ನು ಬದಲಾವಣೆ ಮಾಡಿದೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಹೇಳಿಕೆ ನೀಡಿರುವ ಸಿಬಿಐ ಅಧಿಕಾರಿ ವಿಜಯ್ ಮಲ್ಯ ವಿರುದ್ಧದ ಮೊದಲ ಬಂಧನ ಆದೇಶ ತಪ್ಪಾಗಿತ್ತು ಎಂದು ಸಮರ್ಥನೆ ನೀಡಿದ್ದಾರೆ.

Write A Comment