ರಾಷ್ಟ್ರೀಯ

ಕ್ರಿಕೆಟ್ ಪಂದ್ಯಕ್ಕೆ ಭದ್ರತೆ ಬೇಡಿಕೆ ಇಟ್ಟ ಪಾಕಿಸ್ತಾನದ ಬಗ್ಗೆ ಫಾರೂಕ್ ಅಬ್ದುಲ್ಲಾ ಲೇವಡಿ

Pinterest LinkedIn Tumblr

farooq abdullah

ಜಮ್ಮು: ಭಾರತದಲ್ಲಿ ಕ್ರಿಕೆಟ್ ಆಡುವುದಕ್ಕೆ ಭದ್ರತೆಯ ಬೇಡಿಕೆ ಇಟ್ಟಿರುವ ಪಾಕಿಸ್ತಾನದ ಬಗ್ಗೆ ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಲೇವಡಿ ಮಾಡಿದ್ದು, ಪಾಕಿಸ್ತಾನದವರಿಗೆ ತಾವು ಮಾಡಿದ್ದು ಈಗ ತಮಗೇ ಮುಳುವಾಗಿದೆ ಎಂಬುದು ಅರ್ಥವಾದಂತಿದೆ ಎಂದು ಹೇಳಿದ್ದಾರೆ.

ಪಂದ್ಯಕ್ಕೆ ಭದ್ರತೆಯ ಬೇಡಿಕೆ ಇಟ್ಟಿರುವ ಪಾಕಿಸ್ತಾನಕ್ಕೆ ತಾವು ಮಾಡಿದ್ದು ಈಗ ತಮಗೇ ಮುಳುವಾಗಿದೆ ಎಂಬುದು ಅರ್ಥವಾದಂತಿದೆ. ಪಾಕಿಸ್ತಾನ ಭಯೋತ್ಪಾದನೆಯನ್ನು ಬೆಳೆಸದೆ ಇದ್ದಿದ್ದರೆ ಇಂದು ಭದ್ರತೆಗೆ ಬೇಡಿಕೆ ಇಡುವ ಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಆದರೆ ಈಗ ಅಂತಹ ಸ್ಥಿತಿ ಇಲ್ಲ, ಭಯೋತ್ಪಾದನೆ ಜನರ ಮನಸ್ಥಿತಿಯನ್ನು ಬದಲಾವಣೆ ಮಾಡಿದೆ ಎಂದು ಫಾರೂಕ್ ಅಬ್ದುಲ್ಲಾ ಅಭಿಪ್ರಾಯಪಟ್ಟಿದ್ದಾರೆ.

ಪಂದ್ಯ ಯಶಸ್ವಿಯಾಗಿ ನಡೆಯಬೇಕೆಂದರೆ ಪಾಕಿಸ್ತಾನಕ್ಕೆ ಅಗತ್ಯವಿರುವ ಭದ್ರತೆಯನ್ನು ಒದಗಿಸಬೇಕು, ಪಂದ್ಯ ನಡೆಯಲಿದೆ ಎಂಬ ವಿಶ್ವಾಸವಿದೆ ಎಂದು ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.

Write A Comment