ನವದೆಹಲಿ: ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ನಡುವಿನ ಬ್ರೇಕ್ ಅಪ್ ಕಾರಣ ಕೊನೆಗೂ ಬಹಿರಂಗವಾಗಿದೆ.
ಅನುಷ್ಕಾ ಶರ್ಮಾ ಮತ್ತು ರಣವೀರ್ ಕಪೂರ್ ಅಭಿನಯದ ಬಾಂಬೆ ವೆಲ್ವೆಟ್ ಚಿತ್ರಕ್ಕೆ ವಿರಾಟ್ ಕೊಹ್ಲಿ 40 ಕೋಟಿ ರು. ಬಂಡವಾಳ ಹೂಡಿದ್ದರು. ಅನುರಾಗ್ ಕಶ್ಯಪ್ ನಿರ್ದೇಶನದ ಈ ಚಿತ್ರಕ್ಕೆ ಸುಮಾರು 120 ಕೋಟಿ ರೂ ಇನ್ ವೆಸ್ಟ್ ಮಾಡಲಾಗಿತ್ತು. ಆದರೆ ಬಾಕ್ಸ್ ಆಫೀಸ್ ನಲ್ಲಿ ಸೋತ ರೆಡ್ ವೆಲ್ವೆಟ್ ಕೇವಲ 24 ಕೋಟಿ ಗಳಿಸಿತು.
ತಾನು ಚಿತ್ರಕ್ಕೆ ಹಾಕಿದ್ದ ಹಣವನ್ನು ವಾಪಸ್ ನೀಡುವಂತೆ ಕೊಹ್ಲಿ ಅನುಷ್ಕಾಳನ್ನು ಕೇಳಿದ್ದಾರೆ. ಆದರೆ ತನಗೂ ಇದಕ್ಕೂ ಸಂಬಂಧವಿಲ್ಲ ಎಂದು ಜಾರಿಕೊಂಡ ಅನುಷ್ಕಾ ಕೊಹ್ಲಿ ಜೊತೆ ಮಾತನಾಡದೇ ಆತನನ್ನು ಅವಾಯ್ಡ್ ಮಾಡಿದ್ದಾರೆ. ಹೆಚ್ಚೆಚ್ಚು ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದರು.
ಹಲವು ಭಾರಿ ಮಾತನಾಡಿಸಲು ಯತ್ನಿಸಿದರೂ ಅನುಷ್ಕಾ ಸರಿಯಾಗಿ ಸ್ಪಂದಿಸದ ಕಾರಣ, ಆತ್ಮಾಭಿಮಾನಕ್ಕೆ ಧಕ್ಕೆಯಾಗ ಕೊಹ್ಲಿ ಅನುಷ್ಕಾ ಶರ್ಮಾರಿಂದ ದೂರಾಗಿದ್ದಾರೆ ಎಂದು ಹಿಂದಿ ದಿನಪತ್ರಿಕೆಯೊಂದು ವರದಿ ಮಾಡಿದೆ.
ವ್ಯಾಲಂಟೈನ್ಸ್ ಡೇ ಮುಗಿದು ನಾಲ್ಕು ದಿನ ನಂತರ ಸ್ವಿಸ್ ವಾಚ್ ಕಂಪನಿ Tissot ರಾಯಭಾರಿಯಾಗಿರುವ ವಿರಾಟ್ ಕೊಹ್ಲಿ ಅವರಿಗೆ ಪತ್ರಕರ್ತ ಪ್ರಶ್ನೆಗಳನ್ನು ಕೇಳಿದ್ದರು. ಯಾವ ಸಂಬಂಧದ ಬಗ್ಗೆ ಪ್ರಶ್ನೆ ಕೇಳುತ್ತಿದ್ದೀರಿ? ಇದು ನನಗೆ ಕೇಳಬಹುದಾದ ಪ್ರಶ್ನೆಯಲ್ಲ, ಪರಿಣತರನ್ನು ಕೇಳಿ’ ಎಂದಿದ್ದರು