ಮನೋರಂಜನೆ

ನನ್ನ ಗೆಲುವು ಹುತಾತ್ಮ ಭಾರತೀಯ ಯೋಧರಿಗೆ ಅರ್ಪಣೆ: ವಿಜೇಂದರ್ ಸಿಂಗ್

Pinterest LinkedIn Tumblr

Vijender Singh

ಲಿವರ್‌ಪೂಲ್‌: ಭಾರತ ಬಾಕ್ಸರ್ ವಿಜೇಂದರ್ ಸಿಂಗ್ ವೃತ್ತಿಪರ ಬಾಕ್ಸಿಂಗ್‌ನಲ್ಲಿ ಸಂದ ಸತತ ನಾಲ್ಕನೇ ಜಯವನ್ನು ಪಠಾಣ್‌ಕೋಟ್‌ ವಾಯುನೆಲೆ ಮೇಲಿನ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ಅರ್ಪಿಸಿದ್ದಾರೆ.

30 ವರ್ಷದ ವಿಜೇಂದರ್‌ ವೃತ್ತಿ ಜೀವನದ ನಾಲ್ಕನೇ ಹೋರಾಟದಲ್ಲಿ ಹಂಗೇರಿಯ ಅಲೆಕ್ಸಾಂಡರ್‌ ಹೊವಾರ್ತ್ ಅವರನ್ನು ಮಣಿಸಿದ್ದರು. ಆರು ಸುತ್ತಿನ ಸ್ಪರ್ಧೆಯಲ್ಲಿ ಕೇವಲ ಮೂರು ಸುತ್ತುಗಳಲ್ಲಿ ಜಯ ಒಲಿಸಿಕೊಂಡಿದ್ದರು. ‘ಈ ಗೆಲುವನ್ನು ಜಮ್ಮು ಹಾಗೂ ಪಠಾಣ್‌ಕೋಟ್‌ ದಾಳಿಯಲ್ಲಿ ಹುತಾತ್ಮರಾದ ಭಾರತೀಯ ಸಶಸ್ತ್ರ ಪಡೆಗಳ ಯೋಧರಿಗೆ ಅರ್ಪಿಸುವೆ’ ಎಂದು ಪಂದ್ಯದ ಬಳಿಕ ವಿಜೇಂದರ್ ಹೇಳಿದ್ದಾರೆ.

ವಿಜೇಂದರ್ ಅವರಿಗೆ ಹೂವಾರ್ತ್ ವಿರುದ್ಧದ ಪಂದ್ಯ ಈ ವರ್ಷದ ಮೊದಲ ಪಂದ್ಯ ಎಂಬುದು ವಿಶೇಷ. ಕಳೆದ ವರ್ಷ ಆಡಿದ ಮೂರು ಪಂದ್ಯಗಳಲ್ಲಿ ಈ ಒಲಿಂಪಿಯನ್ ಬಾಕ್ಸರ್‌ ಗೆದ್ದಿದ್ದರು.

Write A Comment