ವಾಷಿಂಗ್ಟನ್ : ಬರುವ ಏಪ್ರಿಲ್ 1ರಿಂದ 2017ನೇ ಸಾಲಿಗೆ ಅತಿ ಕುಶಲ ವರ್ಗದ ನೌಕರರಿಂದ ಹೆಚ್ -1 ಬಿ ವೀಸಾಗಳನ್ನು ಅಮೆರಿಕ ಸ್ವೀಕರಿಸಲಿದೆ.
ಭಾರತದ ಟೆಕ್ಕಿಗಳು ಅಮೆರಿಕದ ಕಂಪೆನಿಗಳಲ್ಲಿ ಕೆಲಸ ಮಾಡಲು ತೆರಳಲು ಹೆಚ್ -1 ಬಿ ವೀಸಾವನ್ನು ಬಳಸುತ್ತಿದ್ದು, ವಿಜ್ಞಾನ, ತಂತ್ರಜ್ಞಾನ ಮತ್ತು ಕಂಪ್ಯೂಟರ್ ಗಳಲ್ಲಿ ಅಗಾಧ ಜ್ಞಾನ ಹೊಂದಿರುವ ಅಮೆರಿಕದಲ್ಲಿ ಕೆಲಸ ಮಾಡಲು ಹೋಗುವವರಿಗೆ ನೀಡಲಾಗುತ್ತದೆ.
ಈ ವರ್ಷ 65 ಸಾವಿರಕ್ಕೂ ಹೆಚ್ಚು ಅರ್ಜಿಗಳು ಆರಂಭದ ಐದು ದಿನಗಳಲ್ಲಿ ಬರುವ ನಿರೀಕ್ಷೆಯಿದೆ ಎನ್ನುತ್ತಾರೆ ಅಮೆರಿಕದ ನಾಗರಿಕತ್ವ ಮತ್ತು ವಲಸೆ ಸೇವಾ ಅಧಿಕಾರಿಗಳು.
ಒಂದು ವೇಳೆ ನಿಗದಿಗಿಂತ ಹೆಚ್ಚು ಅರ್ಜಿಗಳು ಬಂದರೆ ಕಂಪ್ಯೂಟರ್ ರಚಿತ ಲಾಟರಿ ಎತ್ತುವ ವ್ಯವಸ್ಥೆಯನ್ನು ಮಾಡಿ ಮನಬಂದಂತೆ ಹೆಸರುಗಳನ್ನು ತೆಗೆಯಲಾಗುವುದು ಎಂದು ಹೇಳಿದ್ದಾರೆ.