ಹೈದರಾಬಾದ್: ಹೆತ್ತ ತಾಯಿಯೇ ಮಲಗಿದ್ದ ಮಕ್ಕಳನ್ನು ಕತ್ತು ಕೊಯ್ದು ಹತ್ಯೆ ಮಾಡಿರುವ ಧಾರುಣ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.
ಎಂಬಿಐ ಪದವೀಧರೆ ರಜಿನಿ ಚುಟ್ಕೆ ಎಂಬಾಕೆ ತನ್ನ ಮಕ್ಕಳಾದ 8 ವರ್ಷದ ಅಶ್ವಿಕಾ ಹಾಗೂ 3 ವರ್ಷ ಅವಿಷ್ಕಾರನ್ನು ಕತ್ತುಕೊಯ್ದು ಕೊಲೆಮಾಡಿದ್ದಾಳೆ. ಕೊಲೆ ಮಾಡಿದ ನಂತರ ತನ್ನ ಸ್ನೇಹಿತರಿಗೆ ಮಕ್ಕಳನ್ನು ಕೊಲೆ ಮಾಡಿರುವುದಾಗಿ ಸಂದೇಶ ರವಾನಿಸಿದ್ದಾಳೆ.
ಕೊಲೆಗೆ ಕಾರಣವೇನು?: ರಜಿನಿ ಪತಿ ವಿನಯ್ ಚುಟ್ಕೆ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದದ್ದೇ ಕೊಲೆಗೆ ಕಾರಣ ಎನ್ನಲಾಗಿದೆ. ಇದೇ ಸಂದೇಶವನ್ನು ಸ್ನೇಹಿತರಿಗೂ ಮೊಬೈಲ್‍ನಲ್ಲಿ ರಜಿನಿ ತಿಳಿಸಿದ್ದಾಳೆ. ನಂತರ ತಾನು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆದ್ರೆ ಸ್ಥಳೀಯರ ಪ್ರಕಾರ ಒಂದು ವಾರದ ಹಿಂದಿನಿಂದಲೂ ದಂಪತಿಯಿಬ್ಬರು ಜಗಳವಾಡುತ್ತಿದ್ದು, ಇದೇ ಕೊಲೆಗೆ ಕಾರಣವೆನ್ನಲಾಗಿದೆ.
ಇದೆಲ್ಲಾ ಘಟನೆ ನಿನ್ನೆ ರಾತ್ರಿ 9.45ಕ್ಕೆ ನಡೆದಿದ್ದು, ಪತಿ ವಿನಯ್ ಗಿಫ್ಟ್ ಸೆಂಟರ್‍ವೊಂದಕ್ಕೆ ತೆರಳಿದ್ದಾಗ ಮಲಗಿದ್ದ ಮಕ್ಕಳನ್ನು ಮಿಕ್ಸಿ ಜಾರಿನ ಬ್ಲೇಡ್ ಬಳಸಿ ಕತ್ತು ಕೊಯ್ದಿದ್ದಾಳೆ. ನಂತರ ಬಂದ ಗಂಡ ಮನೆಯಲ್ಲಿ ಪತ್ನಿಯಿಲ್ಲದ್ದನ್ನು ಗಮನಿಸಿ ಮಕ್ಕಳು ಮಲಗಿದ್ದ ಕೊಠಡಿಗೆ ಹೋಗಿದ್ದಾನೆ. ಆಗ ಮಕ್ಕಳ ಕೊಲೆ ಬೆಳಕಿಗೆ ಬಂದಿದೆ. ಇತ್ತ ಸಾಯಲು ಹೋಗಿದ್ದ ರಜಿನಿ ತಾನಾಗಿಯೇ ಬಂದು ಪೊಲೀಸರಿಗೆ ಶರಣಾಗಿದ್ದಾಳೆ.