ಮುಂಬಯಿ: ನಟ ಹೃತಿಕ್ ರೋಷನ್ ಮತ್ತು ನಟಿ ಕಂಗನಾ ರಾಣಾವತ್ ನಡುವಿನ ಅಫೇರ್ ವಿಷಯ ಲೀಗಲ್ ನೋಟಿಸ್‌ವರೆಗೆ ಬಂದು ನಿಂತಿದೆ. ತಮಗೆ ಹೃತಿಕ್ ಜತೆ ಅಫೇರ್ ಇದ್ದದ್ದು ನಿಜ ಎಂದು ಸಂದರ್ಶನದಲ್ಲಿ ಹೇಳಿದ್ದ ಕಂಗನಾ ತಮ್ಮ ಹೇಳಿಕೆ ವಾಪಸ್ ಪಡೆಯುವಂತೆ ಕಂಗನಾ ಅವರಿಗೆ ಹೃತಿಕ್ ನೋಟಿಸ್ ನೀಡಿದ್ದಾರೆ.
ಇನ್ನು ಇದಕ್ಕೆ ಪ್ರತಿಯಾಗಿ ಹೃತಿಕ್ ರೋಷನ್ ಅವರಿಗೂ ಕಂಗನಾ ರಾಣಾವತ್ ಅವರೂ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಕಂಗನಾ ವಕೀಲ, ಹೃತಿಕ್ ಹೇಳಿಕೆಯಲ್ಲಿ ಯಾವುದೇ ಹುರುಳಿಲ್ಲ. ಅದು ಮಾನನಷ್ಟ ಮೊಕದ್ದಮೆ ವಿಷಯವಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ನನ್ನ ಹೇಳಿಕೆ ವಾಪಸ್ ಪಡೆಯುವುದಿಲ್ಲ. ಬಾಯಿಗೆ ಬಂದಂತೆ ಮಾತನಾಡಲು ನಾನೇನು ಮಂದ ಬುದ್ದಿಯ ಹುಡುಗಿಯಲ್ಲ ಎಂದು ಕಂಗನಾ ಅವರು ತಮ್ಮ ನೋಟಿಸ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ. ಕಂಗನಾ ಅವರು ಜನರ ಹಾಗೂ ಮಾಧ್ಯಮಗಳ ಗಮನ ಸೆಳೆಯಲು ಈ ಸುಳ್ಳು ಹೇಳಿದ್ದಾರೆ. ನಮ್ಮಿಬ್ಬರ ನಡುವಿನ ಸಂಬಂಧ ವೃತ್ತಿಗೆ ಸಂಬಂಧಿಸಿದ್ದಷ್ಟೆ, ಎಂದು ಹೃತಿಕ್ ಸ್ಪಷ್ಟನೆ ನೀಡಿದ್ದಾರೆ.
ಆದರೆ, ಹೃತಿಕ್ ರೋಷನ್ 2014 ರಲ್ಲಿ ನನಗೆ ಪ್ಯಾರೀಸ್ ನಲ್ಲಿ ಪ್ರಪೋಸ್ ಮಾಡಿದ್ದರು ಎಂದು ಕಂಗನಾ ಹೇಳಿದ್ದಾರೆ, 2014 ರಲ್ಲೇ ಹೃತಿಕ್ ಪತ್ನಿ ಸೂಸೇನ್ ಗೆ ವಿಚ್ಛೇದನ ಪಡೆದಿದ್ದರು.