ಮನೋರಂಜನೆ

‘ತಂದೆ ಚೆನ್ನಾಗಿದ್ದಾರೆ, ಸುಳ್ಳು ಸುದ್ದಿ ಹರಡುವುದನ್ನು ನಿಲ್ಲಿಸಿ’: ಶಶಿ ಕಪೂರ್ ಪುತ್ರ ಕುನಾಲ್

Pinterest LinkedIn Tumblr

Shashi Kapoor

ಮುಂಬೈ: ಬಾಲಿವುಡ್ ನ ಹಿರಿಯ ನಟ ಶಶಿ ಕಪೂರ್ ಅವರು ಆರೋಗ್ಯವಾಗಿದ್ದು, ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಗಾಳಿಸುದ್ದಿಯನ್ನು ಅವರ ಕುಟುಂಬದವರು ತಳ್ಳಿಹಾಕಿದ್ದಾರೆ.

ಶಶಿ ಕಪೂರ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಊಹಾಪೋಹ ನಿನ್ನೆ ಮುಂಜಾನೆಯಿಂದ ಸಾಮಾಜಿಕ ಮಾಧ್ಯಮದಲ್ಲಿ ಸುಳಿದಾಡುತ್ತಿದೆ. ಈ ಬಗ್ಗೆ ಅವರ ಪುತ್ರ ಕುನಾಲ್ ಅವರನ್ನು ಕೇಳಿದಾಗ ಪಿಟಿಐ ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿದ ಅವರು, ” ಅವರು ಮನೆಯಲ್ಲಿದ್ದಾರೆ. ಸುಳ್ಳುಸುದ್ದಿ ಹಬ್ಬಿಸುವುದನ್ನು ನಿಲ್ಲಿಸಿ. ಅವರು ಬದುಕುಳಿದಿದ್ದು, ಚೆನ್ನಾಗಿಯೇ ಇದ್ದಾರೆ ಎಂದು ತೀಕ್ಷ್ಮವಾಗಿ ಪ್ರತಿಕ್ರಿಯಿಸಿದ್ದಾರೆ.

ಅವರ ಸೋದರಳಿಯ ಮತ್ತು ನಟ ರಿಶಿ ಕಪೂರ್ ಕೂಡ ವದಂತಿಯನ್ನು ತಳ್ಳಿ ಹಾಕಿದ್ದಾರೆ. ಟ್ವೀಟ್ ಮಾಡಿರುವ ಅವರು, ”ಮಾವ ಶಶಿ ಕಪೂರ್ ಅವರು ಚೆನ್ನಾಗಿದ್ದಾರೆ. ಅವರ ಬಗ್ಗೆ ಕೇಳಿಬರುತ್ತಿರುವ ಸಂದೇಹಗಳಿಗೆ ನಮ್ಮ ಉತ್ತರ ತೆರೆ ಎಳೆಯುತ್ತದೆ ಎಂದು ಭಾವಿಸುತ್ತೇವೆ.” ಎಂದು ಬರೆದಿದ್ದಾರೆ.

78 ವರ್ಷದ ಬಾಲಿವುಡ್ ನ ದಂತಕಥೆ ಶಶಿ ಕಪೂರ್ ಅವರು ಖ್ಯಾತ ನಟರಾದ ರಾಜ್ ಕಪೂರ್ ಹಾಗೂ ಶಮ್ಮಿ ಕಪೂರ್ ಅವರ ಕಿರಿ ಸಹೋದರ. ಕಳೆದ ಕೆಲ ವರ್ಷಗಳಿಂದ ವೀಲ್ ಚೇರ್ ನಲ್ಲಿ ಓಡಾಡುತ್ತಿರುವ ಶಶಿ ಕಪೂರ್ ಅವರು ಕಿಡ್ನಿ ಸಮಸ್ಯೆಯಿಂದಲೂ ಬಳಲುತ್ತಿದ್ದಾರೆ.

Write A Comment