ರಿಯಾಧ್: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸೌದಿ ಅರೇಬಿಯಾ ಭೇಟಿ ಎರಡನೇ ಹಾಗೂ ಅಂತಿಮ ದಿನವಾದ ಭಾನುವಾರ ದೊರೆ ಸಲ್ಮಾನ್ ಬಿನ್ ಅಬ್ದುಲಾಜೀಜ್ ಅಲ್ ಸಾದ್ ಅವರಿಗೆ ಕೇರಳದ ತ್ರಿಶ್ಯೂರ್ ಜಿಲ್ಲೆಯ ಚೆರಮನ್ ಜುಮಾ ಮಸೀದಿಯ ಚಿನ್ನ ಲೇಪಿತ ಪ್ರತಿಕೃತಿಯನ್ನು ಉಡುಗೊರೆಯಾಗಿ ನೀಡಿದರು.
ಅರಬ್ ವರ್ತಕರು ಕ್ರಿಶ 629ರಲ್ಲಿ ಭಾರತದಲ್ಲಿ ನಿರ್ಮಿಸಿದ ಮೊತ್ತ ಮೊದಲ ಮಸೀದಿ ಇದು ಎಂದು ನಂಬಲಾಗಿದೆ. ಈ ಮಸೀದಿಯಲ್ಲಿ ಒಂದು ಪುರಾತನ ಎಣ್ಣೆಯ ದೀಪವಿದ್ದು, ಇದು ಕಳೆದ ಒಂದು ಸಾವಿರ ವರ್ಷದಿಂದ ಉರಿಯುತ್ತಿದೆ ನಂಬಲಾಗಿದೆ. ಎಲ್ಲಾ ಧರ್ಮಗಳ ಜನರೂ ಈ ಮಸೀದಿಗೆ ಭೇಟಿ ನೀಡುವಾಗ ಎಣ್ಣೆ ತಂದು ದೀಪಕ್ಕೆ ಅರ್ಪಿಸುತ್ತಾರೆ.