ರಾಷ್ಟ್ರೀಯ

ಪನಾಮಾ ಪೇಪರ್ಸ್ ಪ್ರಕರಣ: 15 ವಾರದೊಳಗೆ ತನಿಖಾ ವರದಿ ಸಲ್ಲಿಸಲು ಮೋದಿ ಆದೇಶ

Pinterest LinkedIn Tumblr

modi

ನವದೆಹಲಿ: ಪನಾಮಾ ಪೇವರ್ಸ್ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿದಂತೆ 15 ದಿನಗಳೊಳಗೆ ತನಿಖಾ ವರದಿ ಸಲ್ಲಿಸುವಂತೆ ಪ್ರಧಾನಿ ನರೇಂದ್ರ ಮೋದಿ ಆದೇಶ ನೀಡಿದ್ದಾರೆ.

ಏಪ್ರಿಲ್ 4 ರಂದು ಪನಾಮಾ ಪೇಪರ್ಸ್ ಬಹಿರಂಗ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಸುದ್ದಿ ಮಾಧ್ಯಮವೊಂದರ ಪ್ರಕಾರ ಮೋದಿಯವರು ಬೆಲ್ಜಿಯಂ-ಅಮೆರಿಕ- ಸೌದಿ ಅರೇಬಿಯಾ ಪ್ರವಾಸದಲ್ಲಿದ್ದಾಗ ಏಪ್ರಿಲ್ 4 ನೇ ತಾರೀಖು ಭಾರತದ ಅಧಿಕಾರಿಗಳಿಗೆ ಫೋನ್ ಮಾಡಿ ಪನಾಮಾ ವಿಷಯಕ್ಕೆ ಸಂಬಂಧಿಸಿದ ಚರ್ಚೆ ನಡೆಸಿದ್ದರು.

ಈ ವೇಳೆ ಪನಾಮಾ ಪೇಪರ್ಸ್ ಬಹಿರಂಗ ಪ್ರಕರಣದ ಬಗ್ಗೆ ಆದಷ್ಟು ಬೇಗನೆ ತನಿಖೆ ಆರಂಭಿಸುವಂತೆಯೂ ಮೋದಿ ಆದೇಶಿಸಿದ್ದರು.

ಪ್ರಧಾನಿ ಆದೇಶದ ಮೇರೆಗೆ ಏಪ್ರಿಲ್ 4 ರಂದು ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಪನಾಮಾ ಪೇಪರ್ಸ್ ಬಹಿರಂಗ ಪ್ರಕರಣದ ತನಿಖೆಗಾಗಿ ವಿಶೇಷ ಕಮಿಟಿಯನ್ನು ರೂಪಿಸಿದ್ದರು. ಇದೀಗ ಮುಂದಿನ 15 ದಿನಗಳೊಳಗೆ ತನಿಖಾ ವರದಿಯನ್ನು ಸಲ್ಲಿಸಬೇಕೆಂದು ಪ್ರವಾಸದಿಂದ ವಾಪಸ್ ಆಗಿರುವ ಮೋದಿ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.

Write A Comment