ನವದೆಹಲಿ: ಭಾರತಕ್ಕೆ ಇದೇ ಮೊದಲ ಬಾರಿಗೆ ಆಗಮಿಸಿರುವ ಬ್ರಿಟನ್ ಯುವರಾಜ ವಿಲಿಯಮ್ಸ್ ಮತ್ತು ರಾಜಕುವರಿ ಕೇಟ್ ಮಿಡ್ಲಟನ್ ಅವರು ಭಾನುವಾರ ಮುಂಬೈನಲ್ಲಿ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರೊಂದಿಗೆ ಕ್ರಿಕೆಟ್ ಆಡಿದರು.
ಭಾರತಕ್ಕೆ ಭೇಟಿ ನೀಡಿರುವ ಬ್ರಿಟನ್ ರಾಜದಂಪತಿಗಳಾದ ವಿಲಿಯಮ್ ಮತ್ತು ಕೇಟ್ ಮಿಡ್ಲ್ ಟನ್ ಅವರು ಕ್ರಿಕೆಟ್ ಪಂದ್ಯ ಸೇರಿ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾದರು.
ಮುಂಬೈನ ಪ್ರಸಿದ್ಧ ಓವಲ್ ಮೈದಾನದಲ್ಲಿ ನಡೆದ ದತ್ತಿ ಕ್ರಿಕೆಟ್ ಪಂದ್ಯದಲ್ಲೂ ರಾಜದಂಪತಿ ಪಾಲ್ಗೊಂಡಿದ್ದರು. ರಾಜಕುಮಾರ್ ವಿಲಿಯಮ್ ಬ್ಯಾಟಿಂಗ್ ಗೆ ಸಚಿನ್ ಬೌಲಿಂಗ್ ಮಾಡಿದರು. ರಾಜಕುಮಾರಿ ಕೇಟ್ ಸಹ ಬ್ಯಾಟಿಂಗ್ ಮಾಡಿದರು. ಇನ್ನು ಕೇಟ್ ಅವರು ಪುಟ್ ಬಾಲ್ ಪಂದ್ಯವನ್ನು ಮಕ್ಕಳೊಂದಿಗೆ ಆಡಿದರು.