ನವದೆಹಲಿ: ಭಾರತದ ಕ್ರಿಕೆಟಿಗ ರೋಹಿತ್ ಶರ್ಮಾ ವಿವಾಹದ ಸಂಗೀತ ಕಾರ್ಯಕ್ರಮದ ವೇಳೆ ಭಾರತದ ತಂಡದ ಮತ್ತೊರ್ವ ಆಟಗಾರ ವಿರಾಟ್ ಕೊಹ್ಲಿ ಅವರು ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಜೊತೆ ನೃತ್ಯ ಮಾಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಜನಪ್ರಿಯವಾಗಿದೆ.
ಸಾರಿ ಕಾ ಫಾಲ್ ಸಾ ಕೊಯಿ ಮ್ಯಾಚ್ ಕಿಯಾರೆ ಎಂಬಾ ಹಾಡಿಗೆ ಸೋನಾಕ್ಷಿ ಜೊತೆ ಕೊಹ್ಲಿ ಸ್ಪೆಪ್ ಹಾಕಿದ್ದಾರೆ. ಈ ಹಾಡು ಸೋನಾಕ್ಷಿ ನಟಿಸಿರುವ ಆರ್ ರಾಜ್ ಕುಮಾರ್ ಚಿತ್ರದ ಹಾಡು. ಅಷ್ಟೇ ಅಲ್ಲದೇ, ಪಂಜಾಬಿನ ಹಾಡಿಗೂ ಕೊಹ್ಲಿ ತಮ್ಮದೇ ಸ್ಟೈಲಿನಲ್ಲಿ ಸ್ಟೆಪ್ ಹಾಕಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆಗಾಗ ಗೇಲ್ ಜೊತೆ ನೃತ್ಯ ಮಾಡಿ ಸುದ್ದಿಯಾಗುತ್ತಿದ್ದ ಕೊಹ್ಲಿ, ಈಗ ಸೋನಾಕ್ಷಿ ಜತೆ ಹೆಜ್ಜೆ ಹಾಕಿ ಸುದ್ದಿಯಲ್ಲಿದ್ದಾರೆ.