ಮೊಹಾಲಿ : ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ನೂತನ ತಂಡ ಗುಜರಾತ್ ಲಯನ್ಸ್ ಸೋಮವಾರ ಕಿಂಗ್ಸ್ ಇಲೆವನ್ ಪಂಜಾಬ್ ತಂಡವನ್ನು ಅದರ ತವರು ನೆಲದಲ್ಲಿಯೇ ಮಣಿಸಿತು.
ಆರಂಭಿಕ ಬ್ಯಾಟ್ಸ್‌ಮನ್ ಆ್ಯರನ್ ಫಿಂಚ್ (74; 47ಎ, 12ಬೌಂ) ಮತ್ತು ದಿನೇಶ್ ಕಾರ್ತಿಕ್ (ಔಟಾಗದೆ 41; 26ಎ,7ಬೌಂ) ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಲಯನ್ಸ್ ತಂಡವು 5 ವಿಕೆಟ್‌ಗಳಿಂದ ಕಿಂಗ್ಸ್ ವಿರುದ್ಧ ಜಯಿಸಿತು.
ಟಾಸ್ ಗೆದ್ದು ಫೀಲ್ಡಿಂಗ್ ಮಾಡಿದ ಸುರೇಶ್ ರೈನಾ ಬಳಗಕ್ಕೆ ಕಿಂಗ್ಸ್ 161 ರನ್‌ಗಳ ಗುರಿ ನೀಡಿತ್ತು. ಇನಿಂಗ್ಸ್ ಮುಕ್ತಾಯಕ್ಕೆ ಇನ್ನೂ 14 ಎಸೆತಗಳು ಬಾಕಿಯಿರುವಾಗಲೇ ಲಯನ್ಸ್ ಗುರಿ ಮುಟ್ಟಿತು.
ಸ್ಫೋಟಕ ಬ್ಯಾಟ್ಸ್‌ಮನ್ ಬ್ರೆಂಡನ್ ಮೆಕ್ಲಮ್ ಒಂದೂ ರನ್ ಗಳಿಸದೇ ಮೊದಲ ಓವರ್‌ನಲ್ಲಿಯೇ ಔಟಾದರು. ಆದರೆ, ಇನ್ನೊಂದೆಡೆ ಕ್ರೀಸ್‌ನಲ್ಲಿದ್ದ ಫಿಂಚ್ ಎದುರಾಳಿ ಬೌಲರ್‌ಗಳಿಗೆ ಸಿಂಹ ಸ್ವಪ್ನವಾದರು. 12 ಬೌಂಡರಿಗಳನ್ನು ಬಾರಿಸಿದ ಅವರು ಎರಡನೇ ವಿಕೆಟ್ ಜೊತೆಯಾಟದಲ್ಲಿ ರೈನಾ (20 ರನ್) ಅವರೊಂದಿಗೆ 51 ರನ್ ಸೇರಿಸಿದರು. ನಂತರ ದಿನೇಶ್ ಜೊತೆ ಮೂರನೇ ವಿಕೆಟ್ ಜತೆಯಾಟದಲ್ಲಿ 55 ರನ್ ಕಲೆಹಾಕಿದರು.
ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ತಂಡವು ವಿಜಯ್ (42; 34ಎ, 5ಬೌಂ, 1ಸಿ) ಮತ್ತು ಮನನ್ ವೊಹ್ರಾ (38; 23ಎ, 4ಬೌಂ, 2ಸಿ) ಅವರ ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 161 ರನ್ ಗಳಿಸಿತು.
ತಮಿಳುನಾಡಿನ ಕಲಾತ್ಮಕ ಬ್ಯಾಟ್ಸ್ ಮನ್ ವಿಜಯ್ ಮತ್ತು ಸ್ಥಳೀಯ ಆಟ ಗಾರ ವೊಹ್ರಾ ಮೊದಲ ವಿಕೆಟ್‌ಗೆ 78 ರನ್ (50 ಎಸೆತಗಳು) ಗಳಿಸಿದರು. ರವೀಂದ್ರ ಜಡೇಜ ಇವರಿಬ್ಬರ ವಿಕೆಟ್ ಪಡೆದರು.
ಬ್ರಾವೊ ಮಿಂಚು: ನಂತರ ಡ್ವೇನ್ ಬ್ರಾವೊ ಅಮೋಘ ಬೌಲಿಂಗ್‌ನಿಂದಾಗಿ ಮಧ್ಯಮ ಕ್ರಮಾಂಕವು ಕುಸಿಯಿತು. ಬ್ರಾವೊ (22ಕ್ಕೆ4) ಉತ್ತಮ ಬೌಲಿಂಗ್ ಮಾಡಿ ಪಂಜಾಬ್ ತಂಡದ ಬೃಹತ್ ಮೊತ್ತದ ಕನಸಿಗೆ ಅಡ್ಡಿಯಾದರು.
ಐಪಿಎಲ್ ಟೂರ್ನಿಗೆ ಪದಾರ್ಪಣೆ ಮಾಡಿದ ಆಸ್ಟ್ರೇಲಿಯಾದ ಮಾರ್ಕಸ್ ಸ್ಟೊಯಿನಿಸ್ (33 ರನ್) ಮತ್ತು ವೃದ್ಧಿ ಮಾನ್ ಸಹಾ (20) ತಂಡವು ಅಲ್ಪ ಮೊತ್ತಕ್ಕೆ ಕುಸಿಯವುದನ್ನು ತಪ್ಪಿಸಿದರು. ಕೊನೆಯ ಓವರ್‌ನಲ್ಲಿ ಇವರಿಬ್ಬರ ವಿಕೆಟ್‌ಗಳನ್ನೂ ಬ್ರಾವೊ ಗಳಿಸಿದರು.
ಸ್ಕೋರ್‌ಕಾರ್ಡ್
ಕಿಂಗ್ಸ್ ಇಲೆವೆನ್ ಪಂಜಾಬ್ 6 ಕ್ಕೆ 161 (20 ಓವರ್‌ಗಳಲ್ಲಿ)
ಮುರಳಿ ವಿಜಯ್ ಬಿ ರವೀಂದ್ರ ಜಡೇಜ 42
ಮನನ್ ವೊಹ್ರಾ ಸಿ ದಿನೇಶ್ ಕಾರ್ತಿಕ್ ಬಿ ರವೀಂದ್ರ ಜಡೇಜ 38
ಡೇವಿಡ್ ಮಿಲ್ಲರ್ ಬಿ ಡ್ವೇನ್ ಬ್ರಾವೊ 15
ಗ್ಲೆನ್ ಮ್ಯಾಕ್ಸ್‌ವೆಲ್ ಬಿ ಡ್ವೇನ್ ಬ್ರಾವೊ 02
ವೃದ್ಧಿಮಾನ್ ಸಹಾ ಸಿ ರವೀಂದ್ರ ಜಡೇಜ ಬಿ ಡ್ವೇನ್ ಬ್ರಾವೊ 20
ಮಾರ್ಕಸ್ ಸ್ಟೋಯಿನಿಸ್ ಸಿ ಆ್ಯರನ್ ಫಿಂಚ್ ಬಿ ಡ್ವೇನ್ ಬ್ರಾವೊ 33
ಅಕ್ಷರ್ ಪಟೇಲ್ ಔಟಾಗದೆ 04
ಮಿಷೆಲ್ ಜಾನ್ಸನ್ ಔಟಾಗದೆ 00
ಇತರೆ: (ಬೈ 1, ಲೆಗ್‌ಬೈ 2, ವೈಡ್ 4) 07
ವಿಕೆಟ್ ಪತನ: 1–78 (ವೊಹ್ರಾ; 8.2), 2–91 (ವಿಜಯ್; 10.4), 3–101 (ಮ್ಯಾಕ್ಸ್‌ವೆಲ್ ; 11.4), 4–102 (ಮಿಲ್ಲರ್; 11.6), 5–157
(ಸಹಾ; 19.3),
ಬೌಲಿಂಗ್: ಪ್ರವೀಣಕುಮಾರ್ 4–0–25–0, ಪ್ರದೀಪ್ ಸಂಗ್ವಾನ್ 2–0–21–0, ಜೇಮ್ಸ್ ಫಾಕ್ನರ್ 4–0–39–0 (ವೈಡ್ 2), ಸರಬ್ಜೀತ್ ಲಡ್ಡಾ 2–0–21–0, ರವೀಂದ್ರ ಜಡೇಜ 4–0–30–2 (ವೈಡ್ 1), ಡ್ವೇನ್ ಬ್ರಾವೊ 4–0–22–4 (ವೈಡ್ 1).
ಗುಜರಾತ್ ಲಯನ್ಸ್ 5 ಕ್ಕೆ 162 (17.4 ಓವರ್‌ಗಳಲ್ಲಿ)
ಆ್ಯರನ್ ಫಿಂಚ್ ಸ್ಟಂಪ್ಡ್ ವೃದ್ಧಿಮಾನ್ ಸಹಾ ಬಿ. ಪ್ರದೀಪ್ ಸಾಹು 74
ಬ್ರೆಂಡನ್ ಮೆಕ್ಲಮ್ ಸ್ಟಂಪ್ಡ್ ವೃದ್ಧಿಮಾನ್ ಸಹಾ ಬಿ. ಸಂದೀಪ್ ಶರ್ಮಾ 00
ಸುರೇಶ್ ರೈನಾ ಸಿ. ಮಿಷೆಲ್ ಜಾನ್ಸನ್ ಬಿ. ಮಾರ್ಕಸ್ ಸ್ಟೋಯಿನಿಸ್ 20
ದಿನೇಶ್ ಕಾರ್ತಿಕ್ ಔಟಾಗದೆ 41
ರವೀಂದ್ರ ಜಡೇಜ ರನ್ ಔಟ್ (ಮಿಷೆಲ್ ಜಾನ್ಸನ್) 08
ಈಶಾನ್ ಕಿಶನ್ ಸಿ. ಮೋಹಿತ್ ಶರ್ಮಾ ಬಿ. ಮಿಷೆಲ್ ಜಾನ್ಸನ್ 11
ಡ್ವೇನ್ ಬ್ರಾವೊ ಔಟಾಗದೆ 02
ಇತರೆ: (ಲೆಗ್ ಬೈ–3, ವೈಡ್–3) 06
ವಿಕೆಟ್ ಪತನ: 1–1 (ಮೆಕ್ಲಮ್; 0.6), 2–52 (ರೈನಾ; 5.3), 3–117 (ಫಿಂಚ್; 11.5), 4–133 (ಜಡೇಜ; 14.3), 5–151 (ಕಿಶನ್; 16.5).
ಬೌಲಿಂಗ್: ಸಂದೀಪ್ ಶರ್ಮಾ 3–0–21–1, ಮಿಷೆಲ್ ಜಾನ್ಸನ್ 4–0–35–1, ಮೋಹಿತ್ ಶರ್ಮಾ 2.4–0–24–0, ಮಾರ್ಕಸ್ ಸ್ಟೋಯಿನಿಸ್ 2–0–27–1, ಅಕ್ಷರ್ ಪಟೇಲ್ 2–0–17–0, ಪ್ರದೀಪ್ ಸಾಹು 4–0–35–1.
ಫಲಿತಾಂಶ: ಗುಜರಾತ್ ಲಯನ್ಸ್ ತಂಡಕ್ಕೆ 5 ವಿಕೆಟ್ ಗೆಲುವು
ಪಂದ್ಯಶ್ರೇಷ್ಠ: ಆ್ಯರನ್ ಫಿಂಚ್