ಮನೋರಂಜನೆ

ಮೊದಲ ಮಗುವಿನ ನಿರೀಕ್ಷೆಯಲ್ಲಿ ಹರ್ಭಜನ್-ಗೀತಾ ಬಸ್ರಾ ದಂಪತಿ; ಮದುವೆ ಸರಣಿ ಆಯ್ತು, ಇದೀಗ ಮಕ್ಕಳ ಸಂಭ್ರಮದಲ್ಲಿ ಟೀಂ ಇಂಡಿಯಾ ಆಟಗಾರರು

Pinterest LinkedIn Tumblr

Geeta Basra-Harbhajan Singh

ನವದೆಹಲಿ: ಟೀಂ ಇಂಡಿಯಾ ಆಟಗಾರರ ಮದುವೆ ಸರಣಿ ಬೆನ್ನಲ್ಲೇ ಇದೀಗ ಮಕ್ಕಳ ಸರಣಿ ಶುರವಾಗಿದ್ದು, ಸುರೈಶ್ ರೈನಾ ಬಳಿಕ ಹರ್ಭಜನ್ ಸಿಂಗ್ ಕೂಡ ಈಗ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಭಜ್ಜಿ ಪತ್ನಿ ಗೀತಾ ಬಸ್ರಾ ಗರ್ಭಿಣಿಯಾಗಿದ್ದು, ಈ ವರ್ಷದ ಭಜ್ಜಿ ಕುಟುಂಬ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕಳೆದ ಶುಕ್ರವಾರ ನಡೆದ ಐಪಿಎಲ್ ಉದ್ಘಾಟನಾ ಸಮಾರಂಭದಲ್ಲಿ ಭಜ್ಜಿಯೊಂದಿಗೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಗೀತಾ ಮಾಧ್ಯಮಗಳಿಂದ ದೂರ ಉಳಿಯಲು ಪ್ರಯತ್ನಿಸಿದರಾದರೂ, ಮಾಧ್ಯಮಗಳ ಕಣ್ತಪ್ಪಿಸಲು ಆಗಲಿಲ್ಲ. ಆಗಲೇ ಗೀತಾ ಗರ್ಭಿಣಿಯಾಗಿದ್ದಾರೆ ಎಂದು ತಿಳಿದಿದ್ದು. ಬಳಿಕ ಗೀತಾ ಮತ್ತು ಭಜ್ಜಿ ಕುಟುಂಬದ ಮೂಲಗಳು ಕೂಡ ಗೀತಾ ಗರ್ಭಿಣಿಯಾಗಿರುವುದನ್ನು ಸ್ಪಷ್ಟಪಡಿಸಿದ್ದಾರೆ.

ಇನ್ನು ಪ್ರಸ್ತುತ ತಮ್ಮ ತಂದೆ-ತಾಯಿಯೊಂದಿಗೆ ಸಮಯ ಕಳೆಯುವ ಸಲುವಾಗಿ ಭಜ್ಜಿ ಪತ್ನಿ ಗೀತಾ ಬಸ್ರಾ ಶೀಘ್ರದಲ್ಲಿಯೇ ಪ್ರಯಾಣ ಬೆಳೆಸಲಿದ್ದಾರೆ. ಕಳೆದ 2015ರ ಅಕ್ಟೋಬರ್‌ನಲ್ಲಿ ಹರ್ಭಜನ್, ಗೀತಾರನ್ನು ವಿವಾಹವಾಗಿದ್ದರು.

Write A Comment