ಅಹಮದಾಬಾದ್: ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಲು ಹಾಗೂ ದೇಶದ ಪ್ರಧಾನಿ ಯಾಗಲು ದಲಿತ ಬಾಲಕಿಯೊಬ್ಬಳು ಕಾರಣ ಎಂದು ಗುಜರಾತ್ ಸಚಿವ ರಮಣ್ ಲಾಲ್ ವೋರಾ ಹೇಳಿದ್ದಾರೆ.
ರವೀನಾ ಜಾಧವ್ ಎಂಬ ಬಾಲಕಿ ಮುಖ್ಯಮಂತ್ರಿಗಳ ಬಂಗಲೆಯ ಗೃಹ ಪ್ರವೇಶದ ಸಂದರ್ಭದಲ್ಲಿ ಪವಿತ್ರ ಭಸ್ಮವನ್ನು ತಂದು ಇಟ್ಟಿದ್ದಳು. ಈ ಪವಿತ್ರ ಭಸ್ಮದ ಪ್ರಭಾವದಿಂದಾಗಿ ಮೋದಿ 14 ವರ್ಷಗಳ ಕಾಲ ಗುಜರಾತ್ ಸಿಎಂ ಆಗಿ ನಂತರ ದೇಶದ ಪ್ರಧಾನ ಮಂತ್ರಿಯಾಗಲು ಕಾರಣವಾಯ್ತು ಎಂದು ಎಂದು ಗುಜರಾತ್ ನ ಹಿಂದುಳಿದ ಮತ್ತು ಸಮಾಜ ಕಲ್ಯಾಣ ಸಚಿವ ರಮಣ್ ಲಾಲ್ ಪೋರಾ ಹೇಳಿದ್ದಾರೆ.
ಗುಜರಾತ್ ನ ಮತ್ತೊಬ್ಬ ಸಚಿವ ಭೂಪೇಂದ್ರ ಸಿಂಗ್ ಚೂಡಾಸಮ ಅವರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ರಮಣ್ ಲಾಲ್ ವೋರಾ, 2001ರಲ್ಲಿ ರವೀನಾ ಜಾಧವ್ ಆ ಪವಿತ್ರ ಭಸ್ಮವನ್ನು ನರೇಂದ್ರ ಮೋದಿ ಅವರ ಮನೆಯಲ್ಲಿಟ್ಟಿದ್ದರಿಂದ, ಸೊಹ್ರಾಬುದ್ದೀನ್ ಎನ್ ಕೌಂಟರ್, ಇಶ್ರತ್ ಜಹಾನ್ ಎನ್ ಕೌಂಟರ್, ಹಾಗೂ ಸಿಬಿಐ ದಾಳಿ ಮುಂತಾದ ಪ್ರಕರಣಗಳಿಂದ ಮೋದಿ ಬಚಾವ್ ಆಗಿ 14 ವರ್ಷಗಳ ಕಾಲ ಗುಜರಾತ್ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿ, ನಂತರ ದೇಶದ ಆಡಳಿತ ಚುಕ್ಕಾಣಿ ಹಿಡಿಯಲು ಕಾರಣವಾಯ್ತು ಎಂದು ಹೇಳಿದ್ದಾರೆ