ಮುಂಬಯಿ: ಕಿರುತೆರೆ ನಟಿ ಪ್ರತ್ಯೂಷಾ ಬ್ಯಾನರ್ಜಿ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಆತ್ಮಹತ್ಯೆಗೂ ಮುನ್ನ ಪ್ರತ್ಯೂಷಾ ಗರ್ಭಿಣಿಯಾಗಿದ್ದಳು ಎಂದು ಮಾಹಿತಿ ನೀಡಿರುವ ಜೆಜೆ ಆಸ್ಪತ್ರೆ ವೈದ್ಯರು ತಿಗಳ ಕೆಳಗೆ ಆಕೆ ಗರ್ಭಪಾತ ಮಾಡಿಸಿಕೊಂಡಿದ್ದಾಳೆ ಎಂದು ತಿಳಿಸಿದ್ದಾರೆ.
ಇನ್ನೂ ಪ್ರತ್ಯೂಷಾ ಬ್ಯಾನರ್ಜಿಗೆ ಡಿಎನ್ ಎ ಟೆಸ್ಟ್ ಮಾಡಿಸಲು ಸಾಧ್ಯವಿಲ್ಲ. ಡಿಎನ್ಎ ಟೆಸ್ಟ್ ಗೆ ಅಗತ್ಯವಿರುವ ಶರೀರದ ಯಾವುದೇ ಅಂಗಾಂಶಗಳು ಲಭ್ಯವಿಲ್ಲ ಎಂದು ಹೇಳಿದ್ದಾರೆ.
ಆಕೆ ಆತ್ಮಹತ್ಯೆಗೆ ಒಳಗಾಗುವ ಮುನ್ನ ಆಕೆ ಗರ್ಭಪಾತ ಮಾಡಿಸಿಕೊಂಡಿದ್ದಳು ಎಂದು ಹೇಳಲಾಗಿದ್ದು, ನೇಣು ಬಿಗಿದುಕೊಂಡಿದ್ದರಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದಳು ಶವ ಪರೀಕ್ಷೆಯ ಪ್ರಾಥಮಿಕ ವರದಿಯಲ್ಲಿ ಹೇಳಲಾಗಿದೆ. ಆಕೆಯ ಶವ ಪರೀಕ್ಷೆ ವಿಧಾನವನ್ನು ಸಂಪೂರ್ಣವಾಗಿ ಚಿತ್ರೀಕರಿಸಲಾಗಿದೆ.