ರಾಷ್ಟ್ರೀಯ

ಮದುವೆ ಕಾರ್ಯಕ್ರಮದಲ್ಲಿ ಬಿಜೆಪಿ ಸಂಸದನಿಗೆ ಕಪಾಳಮೋಕ್ಷ ಮಾಡಿದ ಯುವಕ !

Pinterest LinkedIn Tumblr

SONARAM

ಬರ್ಮೆರ: ಮದುವೆ ಕಾರ್ಯಕ್ರಮದ ವೇಳೆ ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಬರ್ಮೆರ್ ಬಿಜೆಪಿ ಸಂಸದ ಸೋನಾರಾಂ ಚೌಧರಿ ಅವರಿಗೆ ಯುವಕನೊಬ್ಬ ಕಪಾಳಮೋಕ್ಷ ಮಾಡಿರುವ ಘಟನೆ ವರದಿಯಾಗಿದೆ.

ಸೋಮವಾರ ನಡೆದ ಮದುವೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಸಂಸದ ಸೋನಾರಾಂ ಹಾಗೂ ಸಂತ್ರಸ್ತ ಯುವಕ ಕಾರ್ತರಾಂ ನಡುವೆ ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಬರ್ಮೆರಾ ಜಿಲ್ಲಾಧಿಕಾರಿ ಹಾಗೂ ಇನ್ನಿತರರ ಎದುರೆ ಯುವಕನು ಸಂಸದ ಸೋನಾರಾಂ ಕಪಾಳಕ್ಕೆ ಹೊಡೆದಿದ್ದಾನೆ ಎಂದು ಎಸ್ ಪಿ ಪಾರಿಸ್ ದೇಶ್ ಮುಖ್ ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಕಾರ್ತರಾಂ ಹಾಗೂ ಆತನನೊಂದಿಗಿದ್ದ ಪ್ರೇಮರಾಂ ಬಡುನನ್ನು ವಶಕ್ಕೆ ಪಡೆದು ವಿಚಾರಣೆ ನಂತರ ಇಬ್ಬರನ್ನು ಬಿಡುಗಡೆ ಮಾಡಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಸುಧೀರ್ ಶರ್ಮಾ ಅವರು ಘಟನೆ ನಡೆದ ಸ್ಥಳಕ್ಕಿಂತ ನಾನು ದೂರದಲ್ಲಿದ್ದೆ. ಗದ್ದಲದ ನಂತರ ಸಂಸದರು ಯುವಕನನ್ನು ತಳ್ಳುತ್ತಿರುವುದನ್ನು ನೋಡಿದೆ ಎಂದಷ್ಟೇ ಹೇಳಿದ್ದಾರೆ.

Write A Comment