ರಾಷ್ಟ್ರೀಯ

ರಾಕಿಯ್ ಗನ್ ಪ್ರೇಮ ಫೇಸ್​ಬುಕ್​ನಲ್ಲಿ ಬಹಿರಂಗ

Pinterest LinkedIn Tumblr

roky

ಪಟನಾ: ಕಾರ್ ಓವರ್ ಟೇಕ್ ಮಾಡಿದ್ದಕ್ಕಾಗಿ 19 ವರ್ಷದ ಯುವಕನನ್ನು ಗುಂಡಿಟ್ಟು ಕೊಲೆಗೈದ ಜೆಡಿಯು ಉಚ್ಚಾಟಿತ ಸಂಸದೆ ಪುತ್ರ ರಾಕಿ ಯಾದವ್ನ ಗನ್ ಪ್ರೇಮ್ ಫೇಸ್ಬುಕ್ನಲ್ಲಿ ಇದೀಗ ಬಹಿರಂಗವಾಗಿದೆ.

ರಾಕಿ ಯಾದವ್ ತಮ್ಮ ಫೇಸ್ ಬುಕ್ ಅಕೌಂಟ್ನಲ್ಲಿ ತಮ್ಮ ಬಳಿಯಿರುವ ಎಕೆ 47 ಹಾಗೂ ಒಂದು ಶೂಟಿಂಗ್ ಶ್ರೇಣಿಯ ಗನ್ ಸಹಿತದ ಚಿತ್ರವನ್ನು ಪೋಸ್ಟ್ ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್ ಅಧಿಕಾರಿ, ಅಪ್ಪನ ಕುಮ್ಮಕ್ಕಿನಿಂದಾಗಿಯೇ ರಾಕಿಗೆ ಈ ರೀತಿ ದುಷ್ಕೃತ್ಯ ಮಾಡುವ ಧೈರ್ಯ ಬಂದಿದೆ. ಈ ಗನ್ಗಳಿಗೆ ಲೈಸನ್ಸ್ ಹೊಂದಿದ್ದಾರೆಯೇ ಇಲ್ಲವೇ ಎನ್ನುವುದು ತನಿಖೆಯ ನಂತರ ಗೊತ್ತಾಗಲಿದೆ ಎಂದು ತಿಳಿಸಿದರು.

ವ್ಯಾಪಾರಿಯೊಬ್ಬರ ಪುತ್ರ ಆದಿತ್ಯ ಸಚ್ದೇವ ಹಾಗೂ ಸ್ನೇಹಿತರನ್ನು ಒಳಗೊಂಡ ಸ್ವಿಪ್ಟ್ ಕಾರು ಶಾಸಕಿಯ ಪುತ ರಾಕಿಯ ಎಸ್ಯುುುುವಿ ಕಾರನ್ನು ಓವರ್ ಟೇಕ್ ಮಾಡಿದ ಹಿನ್ನೆಲೆಯಲ್ಲಿ ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆದು, ಆವೇಶಕ್ಕೆ ಒಳಗಾದ ರಾಕಿ ತನ್ನ ಬಳಿ ಇದ್ದ ಪಿಸ್ತೂಲಿನಿಂದ ಆದಿತ್ಯ ಅವರಿಗೆ ಗುಂಡಿಟ್ಟು ಕೊಲೆಗೈದಿದ್ದ. ಮಂಗಳವಾರ ಪೊಲೀಸರು ರಾಕಿಯನ್ನು ಬೋಧಗಯಾ ಸಮೀಪ ಇರುವ ತಂದೆಯ ಕಾರ್ಖಾನೆಯಲ್ಲಿ ಬಂಧಿಸಿದ್ದರು. ಇದೀಗ ತಾಯಿ ಮನೋರಮಾ ದೇವಿ ಅಕ್ರಮ ಮದ್ಯ ತಯಾರಿಕಾ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದಾರೆ.

Write A Comment